ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಕೊಪ್ಪಳ ಜಾತ್ರೆಗೆ 8 ಸಾವಿರ ಶೇಂಗಾ ಹೊಳಿಗೆ

Published 25 ಜನವರಿ 2024, 14:16 IST
Last Updated 25 ಜನವರಿ 2024, 14:16 IST
ಅಕ್ಷರ ಗಾತ್ರ

ಮಸ್ಕಿ: ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರರ ಜಾತ್ರೆಯಲ್ಲಿ ನಡೆಯುವ ದಾಸೋಹಕ್ಕೆ ಪಟ್ಟಣದ ಮಹಿಳೆಯರು 8 ಸಾವಿರ ಶೇಂಗಾ ಹೊಳಿಗೆಯನ್ನು ಸಿದ್ಧಪಡಿಸಿ ಗುರುವಾರ ಮಠಕ್ಕೆ ಕಳಿಸಿಕೊಟ್ಟರು.

ಚೌಡೇಶ್ವರಿ ಭವನದಲ್ಲಿ ನೂರಾರು ಮಹಿಳೆಯರು ಮೂರು ನಾಲ್ಕು ದಿನಗಳಿಂದ ಶೇಂಗಾ ಹೊಳಿಗೆ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಿಂಧನೂರಿನ ಶಿವಕುಮಾರ ಗುಡಿಹಾಳ ಎರಡು ಕ್ವಿಂಟಲ್ ಹೊಳಿಗೆಗೆ ಬೇಕಾಗುವ ಶೇಂಗಾ ಹಾಗೂ ಬೆಲ್ಲ ದಾನವನಾಗಿ ನೀಡಿದ್ದಾರೆ.

ಯುವ ಬ್ರಿಗೇಡ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಹೊಳಿಗೆ ಸಿದ್ಧಪಡಿಸುತ್ತಿದ್ದು, ಗುರುವಾರ ಸಂಜೆ ವೇಳೆಗೆ ಮಠಕ್ಕೆ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಯುವ ಬ್ರಿಗೇಡ್ ಸ್ವಯಂ ಸೇವಕರು ತಿಳಿಸಿದ್ದಾರೆ.

ಶೇಂಗಾ ಹೊಳಿಗೆ ಸಿದ್ದಪಡಿಸುತ್ತಿರುವ ಚೌಡೇಶ್ವರಿ ಭವನಕ್ಕೆ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಹಾಗೂ ಪಟ್ಟಣದ ಅನೇಕ ಪ್ರಮುಖ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಗವಿಸಿದ್ದೇಶ್ವರ ಮಠದ ಭಕ್ತರು ಜೊಳದ ರೊಟ್ಟೆ, ಅಕ್ಕಿ, ಸಕ್ಕರೆ ಸೇರಿದಂತೆ ವಿವಿಧ ಧವಸ ದಾನ್ಯಗಳನ್ನು ಕಳಿಸುವ ಮೂಲಕ ಗವಿಸಿದ್ದೇಶ್ವರ ಜಾತ್ರೆಗೆ ತಮ್ಮ ಅಳಲು ಸೇವೆ ಸಲ್ಲುಸುವ ಮೂಲಕ ದಾಸೋಹದ ಯಶಸ್ವಿಗೆ ಸಹಕಾರ ನೀಡುತ್ತಿರುವುದು ಎಲ್ಲೇಡೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT