ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ’ನನ್ನ ಮಣ್ಣು, ನನ್ನ ದೇಶ‘ ಅಭಿಯಾನದ ಅಂಗವಾಗಿ ದತ್ತುಗ್ರಾಮ ವಡವಾಟಿಯಲ್ಲಿ ಪಂಚಪ್ರಾಣ ಪ್ರತಿಜ್ಞಾವಿಧಿ ಸ್ವೀಕಾರ ಮತ್ತು 75 ಸಸಿ ನೆಟ್ಟು ತೋಪು ನಿರ್ಮಿಸುವ ’ವಸುಧ ವಂದನ‘ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರೋತ್ಸವ, ಆಗಸ್ಟ್‌ಕ್ರಾಂತಿ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿ ಸ್ಮರಣಾರ್ಥ ಕೇಂದ್ರ ಸರ್ಕಾರ ಯೋಜಿಸಿರುವ ಈ ಅಭಿಯಾನದ ಅನುಷ್ಠಾನ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಸಂತೋಷಕುಮಾರ ರೇವೂರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಾಯದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈ.ಆಂಜನೇಯ, ಸದಸ್ಯ ಚಿಟ್ಟಿ ನರಸಣ್ಣ, ಹನುಮಂತು, ರಾಜು, ಮಲ್ಲಯ್ಯ, ಮಲ್ಲೇಶ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ, ಮುಖ್ಯಶಿಕ್ಷಕಿ ಚಿತ್ರಲೇಖಾ ಇದ್ದರು. ವಿದ್ಯಾರ್ಥಿಗಳು ಸೇರಿ ಎಲ್ಲರೂ ಪಂಚ್ ಪ್ರಾಣ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.