ಸಿಂಧನೂರು: ಸನ್ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಹಿರಿಯ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ತಾಲ್ಲೂಕು ಆರೋಗ್ಯಧಿಕಾರಿ ಡಾ.ಅಯ್ಯನಗೌಡ, ಎಲುಬು ಮತ್ತು ಕೀಲು ತಜ್ಞ ಡಾ.ಸಲಾವುದ್ದೀನ್, ಡಾ.ಮಂಜುನಾಥ, ಡಾ.ವಿದ್ಯಾರಾಣಿ, ಡಾ.ಫರಹಸ್ ಹಾಗೂ ಸರ್ಕಾರಿ ಯುನಾನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಮ್ಜದ್ ಶರೀಫ್ ಅವರನ್ನು ಗೌರವಿಸಲಾಯಿತು.

ಈ ವೇಳೆ ಸನ್ರೈಸ್ ಕಾಲೇಜಿನ ಅಧ್ಯಕ್ಷ ಇರ್ಫಾನ್ ಕೆ. ಮಾತನಾಡಿ,‘ನಮ್ಮನ್ನು ಸೃಷ್ಟಿಸಿದ್ದು ಭಗವಂತನಾದರೆ, ನಮಗೆ ಅನಾಹುತವಾದಾಗ ಮರುಜನ್ಮ ನೀಡುವುದು ವೈದ್ಯರು ಮಾತ್ರ. ಆದ್ದರಿಂದ ವೈದ್ಯರನ್ನು ಕಣ್ಣಿಗೆ ಕಾಣುವ ದೇವರೆಂದೇ ಭಾವಿಸಿ ಗೌರವಯುತವಾಗಿ ಕಾಣಬೇಕು’ ಎಂದರು.

ಕಾರ್ಯದರ್ಶಿ ಇರ್ಷಾದ್ ಕೆ., ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಹನುಮೇಶ, ಉಪನ್ಯಾಸಕರಾದ ಅಶುಪಾಷಾ, ಪ್ರಶಾಂತ ಸೇರಿದಂತೆ ಆಸ್ಪತ್ರೆಯ ಆರೋಗ್ಯ ಸಹಾಯಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.