ನವೋದಯ ಸೆಂಟ್ರಲ್‌ ಶಾಲೆ: ಪ್ರತಿಶತ ಸಾಧನೆ

ಶುಕ್ರವಾರ, ಮೇ 24, 2019
26 °C

ನವೋದಯ ಸೆಂಟ್ರಲ್‌ ಶಾಲೆ: ಪ್ರತಿಶತ ಸಾಧನೆ

Published:
Updated:
Prajavani

ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯ ನವೋದಯ ಸೆಂಟ್ರಲ್‌ ಶಾಲೆಯು ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ.

ಶಾಲೆಯ ಒಟ್ಟು 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದರಲ್ಲಿ ಮೂವರು ಡಿಸ್ಟಿಂಕ್ಷನ್‌, ಪ್ರಥಮ ದರ್ಜೆಯಲ್ಲಿ 14, ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವೈಷ್ಣವಿ ಜಾವರ್‌ ಶೇ 93 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ, ಪಿಯುಷ್‌ ಜಾವರ್‌ ಶೇ 92 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಎಂ. ಗ್ರಿಷ್ಮಾರೆಡ್ಡಿ ಶೇ 90 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !