ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಅಪರಾಧ ಠಾಣೆಯ ಪೊಲೀಸರು ಜನ ಜಾಗೃತಿಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸಲು ಶುರು ಮಾಡಿದ್ದಾರೆ. ಗೌತಮ ಬುದ್ಧನ ಸಂದೇಶಗಳನ್ನೂ ಬಳಸಿಕೊಳ್ಳಲು ಆರಂಭಿಸಿದ್ದಾರೆ.

ಸೈಬರ್ ಠಾಣೆಗೆ ಹೊಸ ರೂಪ ನೀಡಿ, ಠಾಣೆಯ ಆವರಣ ಗೋಡೆಗಳ ಮೇಲೆ ಭಿತ್ರಿಚಿತ್ರಗಳನ್ನು ಬರೆಸುವ ಮೂಲಕ ಜನರಿಗೆ ಎಲ್ಲ ಬಗೆಯ ಮಾಹಿತಿ ಕೊಡಲು ಪ್ರಯತ್ನಿಸುತ್ತಿದ್ದಾರೆ. ಗೌತಮ ಬುದ್ಧ ಬೋಧನೆ ಮಾಡಿದ ‘ಆಸೆಯೇ ದುಖಃಕ್ಕೆ ಮೂಲ’ ಸಂದೇಶವನ್ನು ಪ್ರಧಾನವಾಗಿಟ್ಟುಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಬುದ್ಧನ ಭಾವಚಿತ್ರವನ್ನೂ ಬಿಡಿಸಿದ್ದಾರೆ.

ಡಿಜಿಟಲ್ ಅರೆಸ್ಟ್, ಒಟಿಪಿ ವಂಚನೆ, ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಅಪರಾಧ ಎನ್ನುವುದನ್ನು ಗೋಡೆಗಳ ಮೇಲೆ ಚಿತ್ರಬರಹದ ಮೂಲಕ ತಿಳಿವಳಿಕೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಸಹಾಯವಾಣಿ ಸಂಖ್ಯೆಯನ್ನೂ ಬರೆದಿದ್ದಾರೆ. ತಿಳಿದೋ, ತಿಳಿಯದೆಯೋ ಹಣ ಕಳೆದುಕೊಂಡವರಿಗೆ ಮೊದಲ ಹಂತದಲ್ಲಿ ಸಾಂತ್ವನ ಹೇಳಿ ಅವರಿಗೆ ಸಾಧ್ಯವಿರಷ್ಟರ ಮಟ್ಟಿಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ.

ಸೈಬರ್ ಅಪರಾಧಗಳನ್ನು ತಡೆಯಲು ಪೊಲೀಸರು ಸಾಮಾಜಿಕ ಜಾಲತಾಣಗಳ ಹೆಚ್ಚು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವ ಆಪ್ಗಳು ಮತ್ತು ಪೋರ್ಟಲ್ಗಳಂತಹ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಸೈಬರ್ ಪೊಲೀಸರು ಸಾಮಾಜಿಕ ಜಾಲತಾಣಗಳು, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡಿಜಿಟಲ್ ಪ್ರದರ್ಶನಗಳ ಮೂಲಕ ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆನ್ಲೈನ್ ಸೈಬರ್ ದೂರುಗಳನ್ನು ದಾಖಲಿಸಲು ಮತ್ತು ಹಣಕಾಸು ವಂಚನೆಯನ್ನು ತಡೆಯಲು ಈ ಟೋಲ್-ಫ್ರೀ ನಂಬರ್ 1930 ಅನ್ನು ಬಳಸಲಾಗುತ್ತಿದೆ. ಸೈಬರ್ ಸುರಕ್ಷತೆ ಮತ್ತು ಭದ್ರತೆಗಾಗಿ ಜನರನ್ನು ಜಾಗೃತಗೊಳಿಸಲು ಸಂಚಾರ, ಸಾಥಿ ಪೋರ್ಟಲ್ ಹಾಗೂ ಆ್ಯಪ್ ಸಹಾಯ ಪಡೆಯಲಾಗುತ್ತಿದೆ’ ಎಂದು ಸೈಬರ್ ಠಾಣೆಯ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹೇಳುತ್ತಾರೆ.

‘ಸೈಬರ್ ಅಪರಾಧ ತಡೆಯಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಸುಳ್ಳು ಸುದ್ದಿ ಹರಡುವ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಸೈಬರ್ ಅಪರಾಧಗಳನ್ನು ವರದಿ ಮಾಡಲು ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಸೈಬರ್ ಅಪರಧಾ ವರದಿ ಪೋರ್ಟಲ್ ಸಹಕಾರಿಯಾಗಿದೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.