ಗುರುವಾರ , ಜನವರಿ 23, 2020
27 °C

ಇಂಡಿಯಾ ಬುಕ್ ಆಫ್‌ ರೇಕಾರ್ಡ್ಸ್‌ಗೆ ನಿಧಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ದೇಶದ ರಾಜ್ಯಗಳು ಮತ್ತು ವಿವಿಧ ರಾಷ್ಟ್ರಗಳ ರಾಜಧಾನಿಗಳ ಹೆಸರುಗಳನ್ನು ಸರಾಗವಾಗಿ ಹೇಳುವ ಇಲ್ಲಿನ ಮೂರು ವರ್ಷದ ನಿಧಿಶ್ರೀ ಇಂಡಿಯಾ ಬುಕ್ ಆಫ್‌ ರೇಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾಳೆ.

ಪಟ್ಟಣದ ಅಕ್ಷರ ವೇದ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ನಿಧಿಶ್ರೀ  ಕರ್ನಾಟಕ ಬ್ಯಾಂಕ್‌ನ ಮಸ್ಕಿ ಶಾಖೆಯ ವ್ಯವಸ್ಥಾಪಕ ನರೀಶ ಅವರ ಪುತ್ರಿ.

ಸಂಸ್ಕೃತ ಹಾಗೂ ಉಪನಿಷತ್ ಶ್ಲೋಕಗಳನ್ನು ಈಕೆ ಕಂಠಪಾಠ ಮಾಡಿದ್ದಾಳೆ. ಅಲ್ಲದೆ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳಿದರೂ ಥಟ್ ಎಂದು ಉತ್ತರಿಸುತ್ತಾಳೆ.

ಸಂಸ್ಥೆಯು ಬಾಲಕಿಯ  ಜ್ಞಾನ ಹಾಗೂ ನೆನಪಿನ ಶಕ್ತಿ ಗುರುತಿಸಿ ಈ ಗೌರವ ನೀಡಿದೆ.  ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು