ರಾಯಚೂರು: ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಒಂದು ವಾರದಿಂದ ಬೆಲೆ ಏರಿಳಿತವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹40ರಿಂದ ₹ 20ಕ್ಕೆ ಕುಸಿದ ಕಾರಣ ಬೇಡಿಕೆ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೂ ಬೆಲೆ ಕುಸಿತ ಕಂಡಿತು.

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 619 ಕ್ವಿಂಟಲ್ ಈರುಳ್ಳಿ ಆವಕವಾಗಿದೆ. ಶುಕ್ರವಾರ ಈರುಳ್ಳಿ ಪ್ರತಿ ಕ್ವಿಂಟಲ್ಗೆ ಗರಿಷ್ಠ ₹1,690ಗೆ ಮಾರಾಟವಾಗಿದೆ. ಮಾದರಿ ಈರುಳ್ಳಿ ಸಹ ₹1,280 ಇತ್ತು. ಶನಿವಾರ ದಿಢೀರ್ ₹ 1,100ಕ್ಕೆ ಕುಸಿದು ರೈತರಲ್ಲಿ ಆತಂಕ ಸೃಷ್ಟಿಸಿತು.

ಉತ್ತಮ ಇಳುವರಿಯಿಂದಾಗಿ ರಾಜ್ಯದ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಎಪಿಎಂಸಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಆವಕವಾಗಿದೆ. ಇದರಿಂದಾಗಿ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ಜನವರಿ 23ರಂದು ಗರಿಷ್ಠ ಬೆಲೆ ₹1,000-₹1,100ರ ಆಸುಪಾಸಿಗೆ ತಲುಪಿತ್ತು. ಶನಿವಾರವೂ ಬೆಲೆಯಲ್ಲಿ ಹೆಚ್ಚಳ ಕಂಡು ಬರಲಿಲ್ಲ.

‘ಮಾರುಕಟ್ಟೆಗೆ ಅತಿಯಾದ ಈರುಳ್ಳಿ ಆವಕ ಮತ್ತು ಹೊರರಾಜ್ಯಗಳ ಬೇಡಿಕೆ ಕಡಿಮೆಯಾಗಿರುವ ಕಾರಣ ಈರುಳ್ಳಿ ಬೆಲೆ ಕುಸಿದಿದೆ‘ ಎಂದು ಎಪಿಎಂಸಿ ಅಧಿಕಾರಿ ಹೇಳುತ್ತಾರೆ.

ಯಾದಗಿರಿ, ಕಲಬುರಗಿ, ರಾಯಚೂರು, ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ಹೆಚ್ಚಿನ ಬೆಲೆ ಪಡೆಯುವ ನಿರೀಕ್ಷೆಯಲ್ಲಿ ರಾಯಚೂರಿನ ಎಪಿಎಂಸಿಗೆ ಟ್ರ್ಯಾಕ್ಟರ್ಗಳಲ್ಲಿ ಈರುಳ್ಳಿ ತಂದಿದ್ದರು. ಆದರೆ, ಇಲ್ಲಿಯೂ ಬೆಲೆ ಕುಸಿದ ಕಾರಣ ನಷ್ಟ ಅನುಭವಿಸಿದರು.

‘ನಮ್ಮ ಹೊಲದಲ್ಲಿ ಈರುಳ್ಳಿ ಚೆನ್ನಾಗಿ ಬೆಳೆದಿದೆ. ದೊಡ್ಡ ಗಾತ್ರದ ಈರುಳ್ಳಿಗೆ ಒಳ್ಳೆಯ ಬೆಲೆ ಸಿಗಲಿದೆ ಎನ್ನುವ ನಿರೀಕ್ಷೆಯಿಂದ ರಾಯಚೂರಿಗೆ ಬಂದಿದ್ದೆ. ಆದರೆ, ಇಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 1,100ಗೆ ಕುಸಿದು ಆಘಾತ ಉಂಟು ಮಾಡಿದೆ. ಈರುಳ್ಳಿ ಬೆಳೆಗಾರರಿಗೆ ಖರ್ಚು ವೆಚ್ಚವೂ ಬಾರದ ಸ್ಥಿತಿ ಉಂಟಾಗಿದೆ‘ ಎಂದು ಯಾದಗಿರಿಯ ತಮ್ಮಣ್ಣ ಹುಲಿಚಕ್ರ ತಮ್ಮ ಅಳಲು ತೋಡಿಕೊಂಡರು.

‘ರಾಯಚೂರಲ್ಲಿ ದೊಡ್ಡ ಮಾರುಕಟ್ಟೆ ಇರುವ ಕಾರಣ ನಾಲ್ಕು ಜಿಲ್ಲೆಗಳ ಈರುಳ್ಳಿ ಬೆಳೆಗಾರರು ಇಲ್ಲಿಗೆ ಬರುತ್ತಾರೆ. ರೈತರು ಮಾರುಕಟ್ಟೆಯಲ್ಲಿ ಕೂಡಿಟ್ಟುಕೊಂಡು ಬೆಲೆ ಏರುವ ವರೆಗೂ ಕಾಯುವ ಸ್ಥಿತಿಯಲ್ಲಿ ಇಲ್ಲ. ಕಾರಣ ಈರುಳ್ಳಿ ಹಾಳಾಗಲು ಶುರುವಾಗಲಿದೆ. ಹಸಿ ಇರುವ ಕಾರಣ ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕಾಗಲಿದೆ. ಕಾಯುವ ಸ್ಥಿತಿಯಲ್ಲೂ ಇಲ್ಲ, ಮರಳಿ ಊರಿಗೂ ಒಯ್ಯುವ ಸ್ಥಿತಿಯಲ್ಲೂ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.