ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 7 ಏಪ್ರಿಲ್ 2021, 3:09 IST
ಅಕ್ಷರ ಗಾತ್ರ

ಲಿಂಗಸುಗೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡದೆ ಹಾಗೂ ಜನರ ಸಮಸ್ಯೆಗೆ ಸ್ಪಂದನೆ ನೀಡದ ತಾಲ್ಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೂರ್ತಿ ಬಣ) ಕಾರ್ಯಕರ್ತರು ಮನವಿ ಸಲ್ಲಿಸಿದರು.

ಸೋಮವಾರ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಮೂಲಕ ಮನವಿ ಸಲ್ಲಿಸಿದ ಅವರು, ’ವಾರದಲ್ಲಿ ಒಂದೆರಡು ದಿನ ಬಂದು ಹೋಗುವ ಪಿಡಿಒ ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಕೂಲಿಕಾರರಿಗೆ ಕೆಲಸ ಕೊಡುತ್ತಿಲ್ಲ. ಮಷಿನರಿ ಬಳಸಿ ಕೆಲಸ ಮಾಡಿಸಿ, ಕೆಲಸ ಮಾಡದವರ ಖಾತೆಗೆ ಹಣ ಹಾಕಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ‘ ಎಂದು ದೂರಿದರು.

ಹಲವು ವರ್ಷಗಳಿಂದ ಕ್ರಿಯಾಯೋಜನೆ ಮಾಡಿ ಒಪ್ಪಿಗೆ ಪಡೆಯದೆ ಮನಸೋ ಇಚ್ಛೆ ಕೆಲಸ ಮಾಡಿಸುತ್ತ ಬಂದಿದ್ದಾರೆ. ಏನಾದರು ಕೇಳಿದರೆ ಜನರೊಂದಿಗೆ ಅನುಚಿತವಾಗಿ ವರ್ತಿಸುವ ಜೊತೆಗೆ ದೂರು ದಾಖಲಿಸುವುದಾಗಿ ಬೆದರಿಸುತ್ತಾರೆ. ಇದನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಂಘಟನೆ ಮುಖಂಡರಾದ ಯಲ್ಲಾಲಿಂಗ ಕುಣಿಕೆಲ್ಲೂರು, ಚೆನ್ನಪ್ಪ ಹಂಪನಾಳ, ರಾಜೇಶ್ವರಿ ಮಡಿವಾಳ, ಪವನಕುಮಾರ ಕೊಪ್ಪಳ, ದೇವರಾಜ ಜೂಲಗುಡ್ಡ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT