ಶನಿವಾರ, ಜನವರಿ 28, 2023
15 °C

ಹಟ್ಟಿಚಿನ್ನದಗಣಿ: ನವಿಲುಧಾಮ ಸ್ಧಾಪನೆಗೆ ಒತ್ತಾಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಟ್ಟಿಚಿನ್ನದಗಣಿ: ಆನ್ವರಿ, ರೋಡಲಬಂಡ, ಕೋಠಾ ಹಾಗೂ ಗುರುಗುಂಟಾ ಸುತ್ತಮುತ್ತ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯ ನವಿಲುಗಳಿವೆ. ಆದ್ದರಿಂದ ಸರ್ಕಾರ ನವಿಲು ಧಾಮ ಸ್ಧಾಪನೆಗೆ ಮುಂದಾಗಬೇಕು ಎಂದು ಪ್ರವಾಸಿಗರು ಒತ್ತಾಯಿಸುತ್ತಾರೆ.

ಹಟ್ಟಿ ಪಟ್ಟಣದಿಂದ 13 ಕಿ.ಮೀ ದೂರದಲ್ಲಿರುವ ವಂದಲಿ ಮಾರುತಿ ದೇವಸ್ಧಾನಕ್ಕೆ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಇಲ್ಲಿ ನವಿಲುಧಾಮ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ.

ಬೇಟೆಗಾರರಿಗೆ ಬಲಿಯಾಗುತ್ತಿರುವ ನವಿಲುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು. ನವಿಲುಧಾಮ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಎನ್ನುವುದು ಪಕ್ಷಿ ಪ್ರಿಯ ಲಿಂಗರಾಜ, ಅಂಬಣ್ಣ, ವೆಂಕೋಬ ಹಾಗೂ ಅವರ ಆಗ್ರಹ.

ನಿರ್ಲಕ್ಷ್ಯ ಮಾಡಿದರೆ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಯುವಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು