ಸೋಮವಾರ, ಜನವರಿ 27, 2020
27 °C

ಪಶುವೈದ್ಯ ಹತ್ಯೆ ಪ್ರಕರಣ: ಮಾನ್ವಿಯಲ್ಲಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹೈದರಾಬಾದ್‌ನಲ್ಲಿ ಈಚೆಗೆ ನಡೆದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಕರೆ ಮಾಡಿದ್ದ ಪಟ್ಟಿಯನ್ನು ಆಧರಿಸಿ ತನಿಖೆ ಮಾಡುತ್ತಿರುವ ತೆಲಂಗಾಣದ ಪೊಲೀಸರು, ಜಿಲ್ಲೆಯ ಮಾನ್ವಿ ಪಟ್ಟಣದ ಕೆಲವು ವ್ಯಾಪಾರಿಗಳನ್ನು ಬುಧವಾರ ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.

ಹೈದರಾಬಾದ್‌ನಿಂದ ಮಾನ್ವಿಗೆ ಲಾರಿಯಲ್ಲಿ ಇಟ್ಟಿಗೆ ಹಾಗೂ ಇತರೆ ಕಟ್ಟಡ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ ಅಂಗಡಿಗಳ ಮಾಲೀಕರಿಂದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಯಚೂರು, ದಾವಣಗೆರೆ ಹಾಗೂ ಹುಬ್ಬಳ್ಳಿವರೆಗೂ ಆರೋಪಿಗಳು ಓಡಾಡಿಕೊಂಡಿದ್ದನ್ನು ಪೊಲೀಸರಿಗೆ ತನಿಖೆ ವೇಳೆ ಆರೋಪಿಗಳು ತಿಳಿಸಿದ್ದರು. ಈ ಸುಳಿವು ಆಧರಿಸಿ ತೆಲಂಗಾಣ ರಾಜ್ಯದ ಸೈಬರ್ ಕ್ರೈಮ್ ಡಿವೈಎಸ್‌ಪಿ ಶಾಮ್‌ಬಾಬು ನೇತೃತ್ವದ ತಂಡವು ಮಾಹಿತಿ ಸಂಗ್ರಹಿಸುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು