ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಹೊಸರೂಪ ನೀಡಿದ ಶಿಕ್ಷಕ

Last Updated 1 ಜನವರಿ 2022, 10:18 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊಣ್ಣಿಗನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್‌ ಹಿರೇಮಠ ಅವರು ಸಮುದಾಯದ ನೆರವಿನೊಂದಿಗೆ ಶಾಲೆಯನ್ನು ಮಾದರಿ ರೂಪದಲ್ಲಿ ಅಭಿವೃದ್ಧಿ ಮಾಡಿದ್ದಾರೆ.

ಶಾಲೆಗೆ ಹೊಸ ಸ್ವರೂಪ ನೀಡುವುದರ ಜೊತೆಗೆ ಗ್ರಾಮವನ್ನು ಹೊಗೆಮುಕ್ತ, ಬಯಲುಶೌಚ ಮುಕ್ತ, ಸಸ್ಯಶ್ಯಾಮಲೆ ಗ್ರಾಮ, ಕತ್ತಲುಮುಕ್ತ ಗ್ರಾಮ ಹಾಗೂ ವಿಕಾಸ ಗ್ರಾಮವಾಗಿ ಪರಿವರ್ತಿಸಿದ್ದಾರೆ.

ದಾನಿಗಳಿಂದ ಮತ್ತು ಸರ್ಕಾರಿ ಯೋಜನೆ ನೆರವು ತಲುಪುವಂತೆ ಮಾಡಿದ್ದಾರೆ. ಆರಂಭದಲ್ಲಿ 30 ಮಕ್ಕಳ ದಾಖಲಾತಿ ಇದ್ದ ಶಾಲೆಯನ್ನು 200ಕ್ಕೂ ಹೆಚ್ಚು ಮಕ್ಕಳು ದಾಖಲಾಗುವ ಮಟ್ಟಕ್ಕೆ ಅಭಿವೃದ್ಧಿ ಪಡಿಸಿದ್ದಾರೆ. ಗೊಣ್ಣಿಗನೂರು ಶಾಲೆಗೆ ಸುತ್ತಲಿನ 8 ಗ್ರಾಮಗಳಿಂದ ಮಕ್ಕಳು ಖಾಸಗಿ ವಾಹನಗಳಲ್ಲಿ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ.

ಶಾಲೆ ಆವರಣದಲ್ಲಿ 300ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಮಿತ್ರ ಶಾಲೆ ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಿದ್ದರ ಫಲವಾಗಿ ಈವರೆಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಗೊಣ್ಣಿಗನೂರಿನಲ್ಲಿ 17 ವರ್ಷಗಳ ಸೇವೆಯ ಬಳಿಕ ಒಂದು ವರ್ಷದ ಹಿಂದೆ ಕೊಟ್ರೋಶ್‌ ಅವರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಸದ್ಯ ಸಿಂಧನೂರು ತಾಲ್ಲೂಕಿನ ಒಳಬಳ್ಳಾರಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT