ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಮುಸ್ಲಿಂ ಮುಖಂಡನ ಮನೆಯಲ್ಲಿ ಅಯ್ಯಪ್ಪ ಭಕ್ತರಿಗೆ ಪ್ರಸಾದ

Published 24 ಡಿಸೆಂಬರ್ 2023, 14:36 IST
Last Updated 24 ಡಿಸೆಂಬರ್ 2023, 14:36 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಮುಸ್ಲಿಂ ಮುಖಂಡ ಬಿ.ಎ.ಕರೀಂಸಾಬ್‌ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಭಾನುವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಪಟ್ಟಣ ಸೇರಿದಂತೆ ಅಮೀನಗಡ, ಪಾತಾಪುರ, ಲಕ್ಷ್ಮೀನಾರಾಯಣ ಕ್ಯಾಂಪ್‌ ಮತ್ತು ತೋರಣದಿನ್ನಿ ಪೀಠದಲ್ಲಿ ಪೂಜೆ ಮುಗಿಸಿಕೊಂಡು ಆಗಮಿಸಿದ ಐವತ್ತಕ್ಕೂ ಅಧಿಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಸಾದ ಸ್ವೀಕರಿಸಿದರು.

‘ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಮತ್ತು ದೇವಸ್ಥಾನಕ್ಕೆ ತೆರಳಲು ಯಾವುದೇ ಜಾತಿ, ಧರ್ಮ, ಬೇಧ, ಭಾವ ಇಲ್ಲದಿರುವುದು ಮೆಚ್ಚುಗೆಯ ಸಂಗತಿ ಹೀಗಾಗಿ ಮಾಲಾಧಾರಿಗಳಿಗೆ ಎರಡು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದೇನೆʼ ಎಂದು ಕರೀಂಸಾಬ್‌ ತಿಳಿಸಿದರು.

ಚನ್ನಯ್ಯಸ್ವಾಮಿ, ಯಮನಪ್ಪ, ಸುಂದರ ರಾಮರಡ್ಡಿ, ವೆಂಕಟೇಶ, ಶಂಕರ, ದೇವರಾಜ, ಪ್ರಭುರಾಯ, ಶರಣಬಸವ, ನಾಗರಾಜ, ತಾಯಣ್ಣ ಯಾದವ, ವೀರಭಧ್ರಪ್ಪ ವಿಶ್ವಕರ್ಮ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT