ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅನುಕೂಲ: ಪಿಎಸ್ಐ ಸುಜಾತಾ

Published : 10 ಆಗಸ್ಟ್ 2024, 15:31 IST
Last Updated : 10 ಆಗಸ್ಟ್ 2024, 15:31 IST
ಫಾಲೋ ಮಾಡಿ
Comments

ತುರ್ವಿಹಾಳ: ‘ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಲು ಸರ್ಕಾರ ರೂಪಿಸಿದ ಪ್ರತಿಭಾ ಕಾರಂಜಿಯ ಯೋಜನೆ ಸೂಕ್ತ ವೇದಿಕೆಯಾಗಿದೆ’ ಎಂದು ಪಿಎಸ್ಐ ಸುಜಾತಾ ಎನ್ ಹೇಳಿದರು.

ಪಟ್ಟಣದ ವ್ಯಾಪ್ತಿಯ ಗುಂಜಳ್ಳಿ ಕ್ಯಾಂಪಿನ ಶರಣಬಸವಯ್ಯ ತಾತನವರ ವಸತಿ ಶಾಲೆಯಲ್ಲಿ ಶನಿವಾರ ತುರ್ವಿಹಾಳ ಖಾಸಗಿ ಶಾಲೆಗಳ ಒಕ್ಕೂಟದಿಂದ ನಡೆದ ‘ತುರ್ವಿಹಾಳ ವಲಯಮಟ್ಟದ ಪ್ರತಿಭಾ ಕಾರಂಜಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿರ್ಣಾಯಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಪರಾಮರ್ಶಿಸಿ ಆಯ್ಕೆ ಮಾಡಿದಾಗ ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಬೆಳೆಯಲು ಸಾಧ್ಯವಾಗಲಿದೆ’ ಎಂದರು.

ಅಮರಗುಂಡಯ್ಯ ಶಿವಾಚಾರ್ಯರು, ಮಾದಯ್ಯ ಗುರುವಿನ್ ಹಾಗೂ ತಾಲ್ಲೂಕಾ ದೈಹಿಕ ಶಿಕ್ಷಣಾಧಿಕಾರಿ ಸೋಮಲಿಂಗಪ್ಪ ಯು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್, ಶಿಕ್ಷಣ ಸಂಯೋಜಕ ಸಾವನ್ ಕೆ, ಸಿಆರ್‌ಸಿ ಹನುಮೇಶ ಭಂಗಿ, ಅಕ್ಷರ ದಾಸೋಹದ ಸಾಬಣ್ಣ ವಗ್ಗರ, ರಾಮಲಿಂಗಪ್ಪ ಸಹುಕಾರ, ಪಂಪಾಪತಿ ದೇವರಗುಡಿ, ಶರಣೇಗೌಡ ವಿರುಪಾಪೂರ, ಚಂದ್ರಶೇಖರ ಗುಂಡೂರು, ಪ.ಪಂ ಸದಸ್ಯ ವೆಂಕನಗೌಡ, ಆರೋಗ್ಯ ಸಿಬ್ಬಂದಿ ಮೋದಿನ್ ಬೀ, ಮುಖ್ಯಶಿಕ್ಷಕರಾದ ಅಮ್ಮಣ್ಣ ಕಲಮಂಗಿ, ಸುರೇಶ ಬಾರಕೇರ, ಪ್ರವೀಣ ಶಾಸ್ತ್ರೀ, ಜಂಬನಗೌಡ ಬಸಾಪೂರ, ವಿರೂಪಾಕ್ಷಪ್ಪ ಗಚ್ಚಿನಮನಿ, ಅಮರೇಶ ಮಾಟೂರು, ರವಿ ಕಂಪರೆಡ್ಡಿ, ನಾಗರಾಜ ಮಿಲ್ಟ್ರಿ ಭಾಗವಹಿಸಿದ್ದರು.

ಶಿಕ್ಷಕ ಕರಿಯಪ್ಪ ವಿರುಪಾಪೂರ ನಿರೂಪಿಸಿದರು. ಕಳಕಪ್ಪ ಗಡೇದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT