ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ಅನುಷ್ಠಾನಕ್ಕೆ ಆದ್ಯತೆ

Last Updated 23 ಸೆಪ್ಟೆಂಬರ್ 2020, 3:44 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಪಂಚಾಯಿತಿ ಸಿಇಒ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕೆರೆ ಹೊಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ ಕಾರ್ಯ ಕೈಗೊಳ್ಳುವ ಮೂಲಕ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿಕೊಟ್ಟಿದ್ಧಾರೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ಧಾರೆ.

ಲಕ್ಷ್ಮಿಕಾಂತ ರೆಡ್ಡಿ ಅವರ ಈ ಕಾರ್ಯ ಕೋವಿಡ್-19 ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಜಲ ಸಂರಕ್ಷಣೆಗೂ ಕಾರಣವಾಗಿದೆ. ಸರ್ಕಾರಿ ಗೈರಾಣು ಭೂಮಿಯಲ್ಲಿ ಹೊಸದಾಗಿ ಗೋಕಟ್ಟೆ ನಿರ್ಮಾಣ, ಮಾಡಲು ಯೋಚಿಸಿ 2020-21ನೇ ಸಾಲಿನಲ್ಲಿ
ರಾಯಚೂರು ತಾಲೂಕಿನಲ್ಲಿ ಒಟ್ಟು 25 ಸ್ಥಳಗಳಲ್ಲಿ ಪೈಕಿ 24 ಗೋಕಟ್ಟೆ ಕಾಮಗಾರಿಗಳು ಪ್ರಾರಂಭವಾಗಿದ್ದು, ಗಾಣಧಾಳ್ ಗ್ರಾಮ ಪಂಚಾಯಿತಿಯಲ್ಲಿ 6, ಯದ್ಲಾಪೂರು 1 ಮತ್ತು ಕಲ್ಮಲಾ 01 ಸೇರಿ ಒಟ್ಟು 8 ಗೋಕಟ್ಟೆಗಳ ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಈ ಗೋಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.

ಸಿಇಒ ಅವರು ನಿರ್ದೇಶನದ ಮೇರೆಗೆ ತಾಲ್ಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ ಅವರು ಗೋಕಟ್ಟೆ ನಿರ್ಮಿಸುವ ಜವಾಬ್ದಾರಿಗೆ ಮುಂದಾಗಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕಲ್ಯಾಣಿಗಳು ಇದ್ದು. ಅನೇಕ ಕಲ್ಯಾಣಿಗಳ ಪೈಕಿ ಕೆ.ಇರಬಗೇರಾ, ಅಮರಪೂರು, ಮಸರಕಲ್, ಕರಡಿಗುಡ್ಡ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿನ 20 ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸಿ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿದ್ದಾರೆ.

9 ಕಾಮಗಾರಿಗಳ ಪೈಕಿ ಬಿ ಗಣೇಕಲ್, ಗಲಗ, ಕೊತ್ತದೊಡ್ಡಿ, ಮುಷ್ಠರೂ, ರಾಮದುರ್ಗ ಪ್ರಗತಿಯಲ್ಲಿವೆ. ಒಟ್ಟು 6,584 ಮಾನವ ದಿನಗಳು ಸೃಜನೆಯಾಗಿದ್ದು ಕೂಲಿ ಮೊತ್ತ ₹ 17,71,100 ಹಣವನ್ನು ಪಾವತಿಸಲಾಗಿದೆ. ದೇವದುರ್ಗ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT