ಗುರುವಾರ , ಆಗಸ್ಟ್ 5, 2021
23 °C
ಪರೀಕ್ಷಾ ಕೇಂದ್ರದವರೆಗೂ ಗುಂಪಾಗಿ ಬಂದು ಪ್ರತ್ಯೇಕವಾದರು

ಪಿಯು ಪರೀಕ್ಷೆ: 1,347 ವಿದ್ಯಾರ್ಥಿಗಳು ಗೈರುಹಾಜರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ 36 ಪರೀಕ್ಷಾ ಕೇಂದ್ರಗಳಲ್ಲಿ ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆ ಗುರುವಾರ ಸುಗಮವಾಗಿ ನಡೆಯಿತು. 1,347 ವಿದ್ಯಾರ್ಥಿಗಳು ಗೈರುಹಾಜರಿಯಾದರು.

ಪರೀಕ್ಷೆ ಬರೆಯುವುದಕ್ಕೆ ಒಟ್ಟು 19,397 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಹೊರಜಿಲ್ಲೆಗಳಲ್ಲಿ ಓದುತ್ತಿದ್ದ ರಾಯಚೂರಿನ 1,303 ವಿದ್ಯಾರ್ಥಿಗಳು ಕೂಡಾ ಪರೀಕ್ಷೆ ಬರೆದರು. ಯಾವುದೇ ಅಹಿತಕರ ಘಟನೆಗಳು ಕಂಡುಬಂದಿಲ್ಲ. ಕಳೆದ ಮಾರ್ಚ್‌ 23 ರಂದು ನಡೆಯಬೇಕಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ಕೋವಿಡ್‌ ಸೋಂಕಿನ ಕಾರಣದಿಂದ ಮುಂದಕ್ಕೆ ಹಾಕಲಾಗಿತ್ತು. ಇದೀಗ ದ್ವಿತೀಯ ಪಿಯುಸಿ ಎಲ್ಲ ಪರೀಕ್ಷೆಗಳು ಮುಗಿದಂತಾಗಿದೆ.

ಕೋವಿಡ್‌ ಸೋಂಕು ತಡೆಗಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಮುಂಜಾಗೃತೆ ವಹಿಸಲಾಗಿತ್ತು. ಆದರೆ, ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಪೂರ್ವ ಸ್ನೇಹಿತರೊಂದಿಗೆ ಮತ್ತು ಪಾಲಕರೊಂದಿಗೆ ವಿದ್ಯಾರ್ಥಿಗಳು ಗುಂಪಾಗಿಯೇ ನಿಂತಿರುವುದು ಕಂಡುಬಂತು. ರಾಯಚೂರು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಎದುರು ಪರೀಕ್ಷೆ ಆರಂಭವಾಗುವ ಎರಡು ತಾಸು ಮೊದಲೇ ವಿದ್ಯಾರ್ಥಿಗಳು ನೆರೆದಿದ್ದರು.

ಹೊರಗಡೆ ಅಂತರಪಾಲನೆ ಇರಲಿಲ್ಲ. ಆದರೆ, ಪರೀಕ್ಷಾ ಕೇಂದ್ರದೊಳಗೆ ಪ್ರತ್ಯೇಕವಾಗಿಯೆ ಕಳುಹಿಸಲಾಯಿತು. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಸ್ಯಾನಿಟೈಜರ್‌ ಬಳಕೆ ಮಾಡಲಾಯಿತು. ಇದಲ್ಲದೆ ಥರ್ಮಲ್‌ ಸ್ಕ್ಯಾನರ್‌ನಿಂದ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆಯೂ ಇತ್ತು. ಪರೀಕ್ಷಾ ಸಿಬ್ಬಂದಿ ಬೆಳಿಗ್ಗೆಯಿಂದ ಚುರುಕಿನಿಂದ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂತು.

ಇನ್‌ಫ್ಯಾಂಟ್‌ ಜೀಸಸ್‌ ಪದವಿಪೂರ್ವ ಕಾಲೇಜು, ಎಸ್‌ಆರ್‌ಪಿಎಸ್‌ ಮಹಾವಿದ್ಯಾಲಯ, ಟ್ಯಾಗೋರ್‌ ಮಹಾವಿದ್ಯಾಲಯಗಳಲ್ಲಿಯೂ ಬೆಳಿಗ್ಗೆಯಿಂದಲೇ ಜನಸಂದಣಿ ಕಂಡುಬಂತು. ಮಾಸ್ಕ್‌ ಎಲ್ಲರೂ ಧರಿಸಿದ್ದರೂ ಅಂತರ ಪಾಲನೆ ಆಗಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.