ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ: ಒಂದು ಸ್ಥಾನ ಮೇಲಕ್ಕೇರಿದ ರಾಯಚೂರು ಜಿಲ್ಲೆ

ಮೂರು ವಿಭಾಗಗಳಲ್ಲಿ ಬಿ.ಪ್ರಸನ್ನ, ಸುನೀತಾ  ಜಿಲ್ಲೆಗೆ ಟಾಪರ್‌
Published 11 ಏಪ್ರಿಲ್ 2024, 7:48 IST
Last Updated 11 ಏಪ್ರಿಲ್ 2024, 7:48 IST
ಅಕ್ಷರ ಗಾತ್ರ

ರಾಯಚೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯಲ್ಲಿ ಗಮನಾರ್ಹವಾದ ಬದಲಾವಣೆ ಕಂಡು ಬಂದಿಲ್ಲ. ಕಳೆದ ಬಾರಿ 31ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ 30ನೇ ಸ್ಥಾನದಲ್ಲಿ ಗುರುತಿಸಿಕೊಂಡು ಒಂದು ಜಿಲ್ಲೆಯ ಸಾಲಿನಲ್ಲಿ ಒಂದು ಹಂತ ಮಾತ್ರ ಮೇಲಕ್ಕೇರಿದೆ.

2022ರಲ್ಲಿ ಶೇ 57.59 ಫಲಿತಾಂಶ ಬಂದಿತ್ತು. ಕಳೆದ ವರ್ಷ ಶೇ 66.21 ಫಲಿತಾಂಶ ಪಡೆದಿದ್ದರೆ, ಈ ವರ್ಷ ಶೇ 73.11 ಬಂದಿದೆ. ಸ್ವಲ್ಪ ಮಟ್ಟಿಗಾದರೂ ಗುಣಮಟ್ಟದ ಫಲಿತಾಂಶ ಬಂದಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಕಳೆದ ವರ್ಷ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ಇಬ್ಬರು ವಿದ್ಯಾಥಿಗಳು ಸಮಾನವಾಗಿ 600ಕ್ಕೆ 588 ಅಂಕಗಳನ್ನು ಪಡೆಯುವ ಮೂಲಕ ಟಾಪರ್‌ ಆಗಿ ಹೊರಹೊಮ್ಮಿ ಗಮನ ಸೆಳೆದಿದ್ದರು.

ಲಿಂಗಸುಗೂರಿನ ಉಮಾ ಮಹೇಶ್ವರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವರ್ಷಾ 600ಕ್ಕೆ 588 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಳು. ಈ ವರ್ಷವೂ ಉಮಾ ಮಹೇಶ್ವರಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕಾವೇರಿ ಶಿವಪ್ಪ 592 ಅಂಕ ಪಡೆದು ಜಿಲ್ಲೆಯ ಮಾನ ಉಳಿಸಿದ್ದಾಳೆ.

ಪ್ರಾಥಮಿಕ ಹಾಗೂ ಪ್ರೌಢಾ ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ವಿದ್ಯಾರ್ಥಿಗಳಿಗೆ ಪಿಯುಸಿ ಹಂತದಲ್ಲಿ ಒಮ್ಮೆಲೆ ಸುಧಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಹಜವಾಗಿಯೇ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಪಿ.ಯು.ಕಾಲೇಜುಗಳ ಉಪನ್ಯಾಸಕರು ಹೇಳುತ್ತಾರೆ.

ಕರಾವಳಿ ಜಿಲ್ಲೆಗಳು, ಚಿಕ್ಕೋಡಿ, ಬೆಳಗಾವಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಡಳಿತ ಉತ್ತಮ ಫಲಿತಾಂಶ ಪಡೆಯಲು ನಿರಂತರ ಕಾರ್ಯಕ್ರಮ ಆಯೋಜಿಸಿ ಶೈಕ್ಷಣಿಕ ಗುಣಮಟ್ಟದ ಪರಿಶೀಲನೆ ನಡೆಸುತ್ತದೆ. ರಾಯಚೂರು ಜಿಲ್ಲೆಯಲ್ಲಿ ಮೇಲುಸ್ತುವಾರಿಯೂ ಸರಿಯಾಗಿ ಇರದ ಕಾರಣ ಸಹಜವಾಗಿಯೇ ಜಿಲ್ಲೆ ಕಳಪೆ ಸಾಧನೆ ಮಾಡಿದೆ.

ಲಿಂಗಸುಗೂರಿನ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ನಾಲ್ಕು ವರ್ಷಗಳಿಂದ ಉತ್ತಮ ಸಾಧನೆ ಮಾಡಿಕೊಂಡು ಬಂದಿದೆ. 2021ರಲ್ಲಿ ನವ್ಯಶ್ರೀ ಕಲ್ಲಯ್ಯ ಹುನಕುಂಟಿ, ಅಮೃತ ಸಾಗರ, ಅಕ್ಷತಾ ರಮೇಶ, 2022ರಲ್ಲಿ ಆದಿತ್ಯ ಅನಿಲಕುಮಾರ ಭೂಶೆಟ್ಟಿ, 2023ರಲ್ಲಿ ವರ್ಷಾ ಶಶಿಕಾಂತ ಜಿಲ್ಲೆಗೆ ಟಾಪರ್‌ ಆಗಿದ್ದರು. ಪ್ರಸಕ್ತ ವರ್ಷ 2024 ಕಾವೇರಿ ಶಿವಪ್ಪ ಈ ಸ್ಥಾನವನ್ನು ತುಂಬಿದ್ದಾರೆ.

‘ರಾಯಚೂರು ಜಿಲ್ಲೆ ಫಲಿತಾಂಶದಲ್ಲಿ ಒಂದು ಹಂತ ಮೇಲಕ್ಕೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಳ್ಳೆಯ ಫಲಿತಾಂಶ ಬಂದಿದೆ. ಕೋವಿಡ್‌ ಅವಧಿಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು. ಬರುವ ವರ್ಷ ಫಲಿತಾಂಶದಲ್ಲಿ ಸುಧಾರಣೆ ತರಲು ಪ್ರಯತ್ನಿಸಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.

ಶೇ.73.11 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಹೊಸದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಒಟ್ಟು 18,156 ವಿದ್ಯಾರ್ಥಿಗಳಲ್ಲಿ 13,273 ಅಭ್ಯರ್ಥಿಗಳು (ಶೇ 73.11) ಪಾಸಾಗಿದ್ದಾರೆ. ಇದಲ್ಲದೆ 323 ಖಾಸಗಿ ವಿದ್ಯಾರ್ಥಿಗಳು ಮತ್ತು 831 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.

ಕಲಾ ವಿಭಾಗದಿಂದ ಒಟ್ಟು 9,904 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 6,344 (ಶೇ 64.05) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಿಂದ ಒಟ್ಟು 3,629 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2,734 (ಶೇ 75.46) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಿಂದ ಒಟ್ಟು 4,629 ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,195 (ಶೇ 90.62) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲೆಯ 6,421 ವಿದ್ಯಾರ್ಥಿಗಳು ಹಾಗೂ 8,006 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ನಗರ ಭಾಗದ 10,365 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ 2,908 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕೂಲಿಕಾರನ ಮಗಳು ಕಾವೇರಿಗೆ 5ನೇ ರ್‍ಯಾಂಕ್
ಲಿಂಗಸುಗೂರು: ಇಲ್ಲಿನ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಶಿವಪ್ಪ 600ಕ್ಕೆ 592 ಅಂಕಗಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದಾಳೆ. ಕಾವೇರಿ ಸೇರಿ ಒಟ್ಟು 10 ವಿದ್ಯಾರ್ಥಿಗಳು 5ನೇ ರ್‍ಯಾಂಕ್‌ ಹಂಚಿಕೊಂಡಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಭೂಪುರ ತಾಂಡಾದ ಕೃಷಿ ಕೂಲಿಕಾರ ಶಿವಪ್ಪ ಅವರ ಮಗಳು ಕಾವೇರಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ತಾಂಡಾದ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ತಾಂಡಾದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾವೇರಿ‘ಇಷ್ಟೊಂದು ಅಂಕ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರು ಬೋಧಿಸಿದ ಪಾಠವನ್ನು ಸರಿಯಾಗಿ ಆಲಿಸಿ ಪರಿಶ್ರಮ ಪಟ್ಟು ಓದಿರುವೆ. ನನ್ನ ಪರಿಶ್ರಮ ವ್ಯರ್ಥ ಆಗಿಲ್ಲ. ಯಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿರುವೆ’ ಎಂದು ಹೇಳಿದರು.
ವಿವಿಧ ವಿಭಾಗಗಳಲ್ಲಿ ಜಿಲ್ಲಾ ಮಟ್ಟದಲ್ಲಿ ರ್‍ಯಾಂಕ್‌ ಪಡೆದವರು
ವಿಜ್ಞಾನ ವಿಭಾಗ ಹೆಸರು;ಕಾಲೇಜು;ಪಡೆದ ಅಂಕ;ಸ್ಥಾನ ಬಿ.ಪ್ರಸನ್ನ ಶಿವರಾಜ್;ಗಾಯತ್ರಿ ಪದವಿ ಪೂರ್ವ ಕಾಲೇಜುರಾಯಚೂರು;ಶೇ 98.33;ಪ್ರಥಮ ಭೂಮಿಕಾ ವೆಂಕೋಬಾ;ಎಸ್‌ಕೆಎಂ ಪದವಿ ಪೂರ್ವ ಕಾಲೇಜು ದೇವದುರ್ಗ;ಶೇ 98;ದ್ವಿತೀಯ ನೀರಜಾ ಚಂದ್ರಶೇಖರ;ಎಸ್‌ಕೆಎಂ ಪದವಿ ಪೂರ್ವ ಕಾಲೇಜು ದೇವದುರ್ಗ;ಶೇ 98;ದ್ವಿತೀಯ ಕೀರ್ತನಾ ಪತ್ತಾರ;ಪ್ರಮಾಣ ಪದವಿ ಪೂರ್ವ ಕಾಲೇಜು ರಾಯಚೂರು;ಶೇ 98;ದ್ವಿತೀಯ ಪ್ರವೀಣಕುಮಾರ ಬಸವರಾಜ;ಸರ್.ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜು ಲಿಂಗಸುಗೂರು;ಶೇ 98;ದ್ವಿತೀಯ ಶರಣಬಸವ;ಸರ್.ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜು ಲಿಂಗಸುಗೂರು;ಶೇ 97.83;ತೃತೀಯ ವಾಣಿಜ್ಯ ವಿಭಾಗ ಸುನೀತಾ ಚಂದ್ರಶೇಖರ;ಎಕ್ಸ್‌ಲೆಂಟ್‌ ಪದವಿ ಪೂರ್ವ ಕಾಲೇಜು ಸಿಂಧನೂರು;ಶೇ 97.83;ಪ್ರಥಮ ಸಾನಿಕಾ ಚೆನ್ನಪ್ಪ;ಎಕ್ಸ್‌ಲೆಂಟ್‌ ಪದವಿ ಪೂರ್ವ ಕಾಲೇಜು ಸಿಂಧನೂರು;ಶೇ 97.66;ದ್ವಿತೀಯ ಕವಿತಾ ಪರಶುರಾಮ;ಕಳಿಂಗ ಪದವಿ ಪೂರ್ವ ಕಾಲೇಜು ಮಾನ್ವಿ;ಶೇ 97.66;ದ್ವಿತೀಯ ಖಾಜಾ ಹುಸೇನ್‌ ಜಿಲಾನಿಪಾಷಾ;ಎಕ್ಸ್‌ಲೆಂಟ್‌ ಪದವಿ ಪೂರ್ವ ಕಾಲೇಜು ಸಿಂಧನೂರು;ಶೇ 97.5;ತೃತೀಯ ಪ್ರಿಯಾಂಕ;ಪ್ರಭುವಿತಂ ಪದವಿ ಪೂರ್ವ ಕಾಲೇಜು ಮಸ್ಕಿ;ಶೇ 97.5;ತೃತೀಯ ಕಲಾ ವಿಭಾಗ ಕಾವೇರಿ ಶಿವಪ್ಪ;ಶ್ರೀಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ಲಿಂಗಸುಗೂರು;ಶೇ 98.66;ಪ್ರಥಮ ವಿರುಪಾದಿ ಚತ್ರಪ್ಪ;ಶ್ರೀಮತಿ ಎಚ್‌.ಎಸ್‌.ಗೌಡ ಪದವಿ ಪೂರ್ವ ಕಾಲೇಜು ಲಿಂಗಸುಗೂರು;ಶೇ 98;ದ್ವಿತೀಯ ಅರುಂಧತಿ ಅಮರೇಶ;ಅನಿಕೇತನ ಪದವಿ ಪೂರ್ವ ಕಾಲೇಜು ಸಿಂಧನೂರು;ಶೇ 98;ದ್ವಿತೀಯ ರಮೇಶ ಈರಮ್ಮ;ಅನಿಕೇತನ ಪದವಿ ಪೂರ್ವ ಕಾಲೇಜು ಸಿಂಧನೂರು;ಶೇ 97.83;ತೃತೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT