ಶನಿವಾರ, ಮೇ 21, 2022
24 °C
ರಸಪ್ರಶ್ನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

‘ಮೊಬೈಲ್‌ ಬಳಕೆ ಜ್ಞಾನಾರ್ಜನೆಗೆ ಪೂರಕವಾಗಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ‘ಮೊಬೈಲ್, ಟ್ಯಾಬ್, ಲ್ಯಾಪ್‌ಟ್ಯಾಪ್‌ಗಳಂತ ಆಧುನಿಕ ತಂತ್ರಜ್ಞಾನದ ಪರಿಕಾರಗಳನ್ನು ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಳ್ಳಬೇಕು‘ ಎಂದು ಲಿಂಗಸುಗೂರು ಕರ್ನಾಟಕ ಜಾನಪದ ಪರಿಷತ್ತು ಮಹಿಳಾ ಘಟಕದ ಗೌರವಾಧ್ಯಕ್ಷೆ ಶಿವಮ್ಮ ಪಟ್ಟದಕಲ್ ಹೇಳಿದರು.

ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ನಾಗರಾಳ ಸಜ್ಜಲಶ್ರೀ ಕಾಲೇಜು, ರಾಯಚೂರು ಕರ್ನಾಟಕ ಜಾನಪದ ಪರಿಷತ್ತು, ಲಿಂಗಸುಗೂರು ತಾಲ್ಲೂಕು ಜಾನಪದ ಪರಿಷತ್ತು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ರಸಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯಲಕ್ಷ್ಮೀ ಮುಲಿಮನಿ, ಗೋಪಾಲಪ್ಪ ಗುತ್ತೇದಾರ, ಪ್ರಾಂಶುಪಾಲ ಶರಣಪ್ಪ, ಕಮಲಾಕ್ಷಿ ಸೊಪ್ಪಿಮಠ, ರಮೇಶ ಗುತ್ತೇದಾರ ಮಾತನಾಡಿದರು.

ಬಸವರಾಜೇಶ್ವರಿ, ಕೇಶವ ಕಲ್ಲಣ್ಣವರ, ರತ್ನಾ ಬೆಳ್ಳಿಕಟ್ಟಿ, ದೊಡ್ಡಬಸಮ್ಮ ಸಜ್ಜಲಗುಡ್ಡ, ಶಶಿಕಲಾ ಬಯ್ಯಾಪುರ, ಶಿಲ್ಪಾ ಬಯ್ಯಾಪುರ, ಅಮರೇಶ ಮಲ್ಲಪ್ಪ, ಮಂಜುನಾಥ ಪರಸಪ್ಪ, ನಿವೇದಿತಾ ರಾಂಪುರ, ಸಹನಾ ರಾಂಪುರ, ತಬ್ಸುಮ್ ಹಸನಸಾಬ, ಅಶ್ವಿನಿ ಸುಭಾಸಚಂದ್ರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಜ್ಜಲಗುಡ್ಡ-ಕಂಬಳಿಹಾರ ಮಠದ ದೊಡ್ಡಬಸವಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗಂಗಾಧರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಶಿವಶರಣೆ ಶರಣಮ್ಮನವರ ಭಾವಚಿತ್ರಕ್ಕೆ ಲಕ್ಷೀದೇವಿ ಎಲ್. ನಡವಿನಮನಿ ಅವರು ಹೂಮಾಲೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ರಾಮಣ್ಣ ಚಿಲಕದ್, ಉಪಾಧ್ಯಕ್ಷೆ ಲಕ್ಕವ್ವ ಸಾಬಣ್ಣ ಮಸೂತಿ, ಹೊನ್ನಪ್ಪ ಮೇಟಿ, ಹನಮಂತಪ್ಪ ನಾಲತವಾಡ, ಸಾಬಣ್ಣ ಮಕ್ಕಣ್ಣನವರ, ಬಾಲಪ್ಪ ಕನಕೇರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಯಮನೂರಪ್ಪ, ಸಾವಿತ್ರಿ ಜಹಗೀರದಾರ್, ಮಲ್ಲಮ್ಮ ಹೊಸಮನಿ, ದೊಡ್ಡಪ್ಪ ಮೇಟಿ, ಶರಣಪ್ಪ ಕುರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.