ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಲೈಂಗಿಕತೆ ಅಗತ್ಯ

Last Updated 23 ಏಪ್ರಿಲ್ 2018, 19:36 IST
ಅಕ್ಷರ ಗಾತ್ರ

ದೇಶದ ಎಲ್ಲೆಡೆ ಅತ್ಯಾಚಾರ, ಮಾನಭಂಗ, ಮರ್ಯಾದೆಗೇಡು ಹತ್ಯೆ, ಬಲಾತ್ಕಾರದಂಥ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಪ್ರಾಗೈತಿಹಾಸ ಪುರಾಣ ಕಾಲದಿಂದಲೂ ಮಾನವನ ಕೌಮಾರ್ಯದಿಂದ ವಿವಾಹ ಹಂತದ ತನಕವೂ ಅಗಲಿಕೆ, ವಿರಹ, ಅವಿವಾಹಿತ, ವೈಧವ್ಯ, ಸೈನಿಕಸೇವೆ ಮುಂತಾದ ಸಂದರ್ಭ ಪರಿಸ್ಥಿತಿಗಳಲ್ಲಿ ಜೈವಿಕ ಅಗತ್ಯದ ಸಮತೋಲನಕ್ಕೆ ಲೈಂಗಿಕ ಮುಕ್ತತೆ ಅತ್ಯವಶ್ಯಕ ಎನ್ನುವುದು ಅಡಿಗಡಿಗೆ ಪ್ರತಿಪಾದಿತವಾಗಿದೆ. ನಿದ್ರೆ, ಆಹಾರ, ಬಾಯಾರಿಕೆಯಂತೆ ಮೈಥುನಕ್ಕೂ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಮುಖ್ಯ ನೀಡಲಾಗಿದೆ. ಜಗತ್ತಿಗೆ

‘ಕಾಮಸೂತ್ರ’ಗಳನ್ನು ನೀಡಿದವರು ನಮ್ಮ ದೇಶದ ವಾತ್ಸ್ಯಾಯನ ಮಹರ್ಷಿ. ಅವರು ಪ್ರತಿಪಾದಿಸಿದಂತೆ ಸ್ವಸ್ಥ ಸಮಾಜಕ್ಕೆ ಮುಕ್ತ ಲೈಂಗಿಕತೆ ಅತ್ಯಗತ್ಯ. ಅದಕ್ಕಾಗಿ ವೇಶ್ಯಾಗೃಹಗಳನ್ನು ವೈದ್ಯಶಾಲೆಗಳಂತೆ ಕಾನೂನುಬದ್ಧವಾಗಿ ತೆರೆದರೆ ಲೈಂಗಿಕ ಅಪರಾಧಗಳು ತಾವಾಗಿ ನಿಲ್ಲುತ್ತವೆ.

ವೇಶ್ಯಾವಾಟಿಕೆಯನ್ನು ಪೋಷಿಸುವ ಥಾಯ್ಲೆಂಡ್‌ನಲ್ಲಿ ಲೈಂಗಿಕ ಅಪರಾಧಗಳಿಲ್ಲ. ಮಾನಸಿಕ ರೋಗಿಗಳ ಸಂಖ್ಯೆ ಗಣನೀಯ ಇಳಿಮುಖ. ಮುಕ್ತ ಲೈಂಗಿಕ ತಾಣಗಳಾದ ವೇಶ್ಯಾವಾಟಿಕೆಯು ವ್ಯಾಪಕವಾಗಿರುವುದರಿಂದ ಗುಪ್ತರೋಗಗಳು ಮರೆಯಾಗಿವೆ. ಕೆಲವರ ತೋರಿಕೆಯ ಮಡಿವಂತಿಕೆಯ ಹಟಮಾರಿತನಕ್ಕೆ, ‘ಸಂಸ್ಕೃತಿ’ ಎಂದು ಬಿಂಬಿಸುವವರ ಹುಸಿವಾದಗಳಿಗೆ ಒಳಗಾಗದೆ ನಮ್ಮ ದೇಶದಲ್ಲೂ ಹಿಂದಿನಂತೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು. ಲೈಂಗಿಕ ಸೇವಾಕರ್ತರನ್ನು ಸಾಮಾಜಿಕವಾಗಿ ಗೌರವಿಸಿ, ಅವರ ಸೇವೆಯನ್ನು ಮಾನ್ಯಗೊಳಿಸುವುದು ಲೈಂಗಿಕ ಅಪರಾಧಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ.

ಡಾ.ವೆಂಕಟಯ್ಯ ಅಪ್ಪಗೆರೆ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT