ಶುಕ್ರವಾರ, ಮಾರ್ಚ್ 5, 2021
27 °C
ಸಿಂಧನೂರು: ತರಗತಿ ಕೊಠಡಿಯಲ್ಲಿ ಅಡುಗೆ ಪರಿಕರ ದಾಸ್ತಾನು

ಬಿಸಿಯೂಟದ ಕೋಣೆಗಳ ನಿರ್ಲಕ್ಷ್ಯ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Deccan Herald

ಸಿಂಧನೂರು: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆಗಳ ಬಿಸಿಯೂಟ ಅಡುಗೆ ಕೋಣೆಗಳು ದುರಸ್ತಿ ಭಾಗ್ಯ ಕಂಡಿಲ್ಲ. ಶಾಲಾ ಕೊಠಡಿಗಳಲ್ಲಿ ಬಿಸಿಯೂಟ ಬೇಯುತ್ತಿದ್ದು, ಅಡುಗೆ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ತಾಲೂಕಿನಾದ್ಯಂತ 361 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇವೆ. ಈ ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಸಿದ್ದಪಡಿಸುವ ಕೋಣೆಗಳು ಇಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ. ಕೆಲವೆಡೆ ಕೋಣೆಗಳಿದ್ದರೂ ಬಿರುಕು ಬಿಟ್ಟಿವೆ. ಅವು ಶಿಥಿಲಾವಸ್ಥೆಯಲ್ಲಿ ಇರುವ ಕಾರಣಕ್ಕೆ ಶಾಲಾ ಕೊಠಡಿಗಳಲ್ಲೇ ಅಡುಗೆ ಸಿದ್ಧಪಡಿಸಲಾಗುತ್ತಿದೆ.

ಅಡುಗೆ ಕೋಣೆಯಿರದ ಕಾರಣ ಶಾಲೆಗಳ ತರಗತಿ ಕೊಠಡಿಗಳನ್ನೇ ಆಹಾರ ಸಿದ್ಧಪಡಿಸಲಾಗುತ್ತದೆ. ಕೊಠಡಿಯ ಒಂದು ಭಾಗದಲ್ಲಿ ಮಕ್ಕಳು ಪಾಠ ಆಲಿಸಲು ಕೂತರೆ, ಇನ್ನೊಂದು ಭಾಗದಲ್ಲಿ ಅಡುಗೆ ದಾಸ್ತಾನು, ಗ್ಯಾಸ್ ಎಲ್ಲವೂ ಇರುತ್ತದೆ. 

‘ಪ್ರತಿ ಶಾಲೆಯಲ್ಲಿ ಸ್ವಂತದ್ದೇ ಆದ ದಾಸ್ತಾನು ಕೊಠಡಿ ಹಾಗೂ ಅಡುಗೆ ಕೋಣೆ ಇದ್ದರೆ ಅನುಕೂಲ. ಆದರೆ ಅಂತಹ ಸೌಲಭ್ಯ ಇಲ್ಲದ ಕಾರಣ ಕೆಲ ಕಡೆ ತೊಂದರೆಯಾಗಿದೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಅನುದಾನ ಮಂಜೂರಾದರೆ, ಕಟ್ಟಡ ನಿರ್ಮಾಣ, ದುರಸ್ತಿಗೂ ಅನುಕೂಲ’ ಎಂದು ಅಧಿಕಾರಿಗಳು ಹೇಳಿದರು.

‘ಅಡುಗೆ ಕೋಣೆ ಇದ್ದರೆ ದಾಸ್ತಾ ನಿಗೂ ಉಪಯುಕ್ತ. ಇಲ್ಲ ವಾದರೆ ಎಲ್ಲೆಂದ ರಲ್ಲಿ ಆಹಾರ ದಾಸ್ತಾನು ಮಾಡಿ ಅದನ್ನು ಹಾಳು ಮಾಡಲಾಗುತ್ತದೆ. ಇಂತಹ ಪ್ರಕರಣ ಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ಶಾಲಾ ಮುಖ್ಯಶಿಕ್ಷಕರಿಗೆ ದಂಡವನ್ನು ವಿಧಿಸಲಾಗಿದೆ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕ ಬಿಸಿಯೂಟದ ಅಡುಗೆ ಕೋಣೆ ನಿರ್ಮಿಸಬೇಕು.ಕೋಣೆಗಳನ್ನು ದುರಸ್ತಿಗೊಳಿ ಸಬೇಕುದು ಎಂದು ಆರ್‌ವೈಎಫ್‌ಐ ಅಧ್ಯಕ್ಷ ನಾಗರಾಜ ಪೂಜಾರ್ ಹಾಗೂ ಮನುಜಮತ ಬಳಗದ ಬಸವರಾಜ ಬಾದರ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.