ಭಾನುವಾರ, ನವೆಂಬರ್ 27, 2022
26 °C

ರಾಯಚೂರು: ಮನೆ ಗೋಡೆ ಕುಸಿದು ಪತಿ, ಪತ್ನಿ, ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಮಾನ್ವಿ: ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಸೋಮವಾರ ನಸುಕಿನಲ್ಲಿ ಮನೆಯಲ್ಲಿ‌ ಮಲಗಿದವರ ಮೇಲೆ ಮನೆ ಗೋಡೆ ಕುಸಿದಿದ್ದರಿಂದ ದಂಪತಿ ಹಾಗೂ ಒಂದು ಮಗು ಮೃತಪಟ್ಟಿದ್ದಾರೆ.

ಪರಮೇಶ (45), ಜಯಮ್ಮ (40)ಹಾಗೂ ಮೃತ ಪರಮೇಶನ ಕಿರಿಯ ಸಹೋದರನ ಪುತ್ರ ಮಗ ಭರತ್(4) ಮೃತರಾಗಿದ್ದಾರೆ. 
ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಣ್ಣಿನ ಗೋಡೆ ನೆನೆದಿದ್ದರಿಂದ ಕುಸಿತ ಉಂಟಾಗಿದೆ.

ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು