ರಾಯಚೂರು: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಬಾರಿಯಾದರೂ ಹಿಂದುಳಿದ ಜಿಲ್ಲೆಗೆ ಏಮ್ಸ್ ದೊರಕಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ರಾಯಚೂರು ಜಿಲ್ಲಾ ಏಮ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಫೆಬ್ರುವರಿ 1ಕ್ಕೆ 1361ನೇ ದಿನಕ್ಕೆ ಪದಾರ್ಪಣೆ ಮಾಡಿದೆ. ರಾಯಚೂರಿನಲ್ಲೇ ಏಮ್ಸ್ ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಕೇಂದ್ರವು ರಾಜ್ಯದ ಮನವಿಗೂ ಸ್ಪಂದಿಲ್ಲ. ಜನರ ಬೇಡಿಕೆಗೂ ಮನ್ನಣೆ ನೀಡಿಲ್ಲ.

ಮುನಿರಾಬಾದ್– ಮೆಹಬೂಬನಗರ ರೈಲು ಮಾರ್ಗ ಹಾಗೂ ಗದಗ–ವಾಡಿ ರೈಲು ಮಾರ್ಗದ ವೇಗ ಹೆಚ್ಚಿಸಲು ಹೆಚ್ಚಿನ ಅನುದಾನದ ಸಿಗುವ ನಿರೀಕ್ಷೆ ಇತ್ತು. ಈ ಅಂಶವೂ ಬಜೆಟ್ನಲ್ಲಿ ಕಾಣಸಿಕ್ಕಿಲ್ಲ. ಇದರಿಂದ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಂದ ಬಜೆಟ್ ಟೀಕೆಗೊಳಗಾಗಿದೆ.

‘ಸ್ಪಷ್ಟತೆ ಇಲ್ಲದ ಬಜೆಟ್ ಇದಾಗಿದೆ.. ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಘೋಷಿಸಲ್ಪಟ್ಟ ಯಾದಗಿರಿ ಮತ್ತು ರಾಯಚೂರಿಗೆ ದೂರದೃಷ್ಟಿ ಹೊಂದಿದ ಯೋಜನೆಗಳನ್ನು ಘೋಷಿಸಿಲ್ಲ. ಕಲ್ಯಾಣ ಕರ್ನಾಟಕವನ್ನೇ ಕಡೆಗಣಿಸಲಾಗಿದೆ. ರಾಯಚೂರಿಗೆ ಏಮ್ಸ್ ದೊರೆಯಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ಹೇಳುತ್ತಾರೆ.

‘ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಗೆ ಒತ್ತುಕೊಟ್ಟಿರುವುದು ಸಂತಸ ಉಂಟು ಮಾಡಿದೆ. ಇದರಿಂದ ಯುವಕರಿಗೆ ಅನುಕೂಲವಾಗಲಿದೆ‘ ಎನ್ನುತ್ತಾರೆ ಸಿರವಾರದ ಭಾಗ್ಯನಗರ ಕ್ಯಾಂಪ್ ರೈತ ರೇವಣಸಿದ್ದಪ್ಪ.

‘2025–26ರ ಅವಧಿಯಲ್ಲಿ ಬೆಳೆ ವಿಮೆ, ಕೃಷಿ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ಅಂದಾಜಿಗಿಂತ ಕಡಿಮೆ ವೆಚ್ಚ ಮಾಡಿರುವುದು ಆತಂಕಕಾರಿ ವಿಷಯವಾಗಿದೆ. ಎಸ್ಸಿ–ಎಸ್ಟಿ ಸಮುದಾಯಗಳ ಕಲ್ಯಾಣ ಹಾಗೂ ಉತ್ತರ ಪೂರ್ವ ಪ್ರದೇಶಗಳ ಅಭಿವೃದ್ಧಿಗೆ ನೀಡಬೇಕಾದ ಆದ್ಯತೆ ಕೂಡ ಕಡಿಮೆಯಾಗಿದೆ. ಇದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ‘ ಎಂದು ಟೀಕಿಸುತ್ತಾರೆ.

‘ರೈತರು, ಕಾರ್ಮಿಕರು, ಮಧ್ಯಮ ವರ್ಗ ಹಾಗೂ ಬಡವರ ಬದುಕನ್ನು ಸುಧಾರಿಸುವತ್ತ ಗಮನ ಹರಿಸಬೇಕಿದ್ದ ಈ ಬಜೆಟ್ ನಿರಾಶಾದಾಯಕವಾಗಿದೆ‘ ಎಂದು ಪ್ರತಿಕ್ರಿಯಿಸಿದ್ದಾರೆ.

‘ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ದಂಡ ಮಾತ್ರ ವಿಧಿಸಲು ಅವಕಾಶ ನೀಡಿರುವುದು ಶಿಕ್ಷೆ ಇಲ್ಲದಿರುವುದು ಉತ್ತಮ ನಿರ್ಧಾರ. ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗೆ ಟಿಸಿಎಸ್ ದರ ಶೇ 5 ರಿಂದ ಶೇ 2ಕ್ಕೆ ಇಳಿಸಿರುವುದು ಒಳ್ಳೆಯ ನಿರ್ಧಾರ’ ಎಂದು ಕವಿತಾಳದ ಔಷಧ ಮಾರಾಟ ಮಳಿಗೆ ಮಾಲೀಕ ಪ್ರಕಾಶ ಇಲ್ಲೂರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.