ರಾಯಚೂರು: ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ಇಬ್ಬರು ವ್ಯಕ್ತಿಗಳು ಹತ್ಯೆಗೀಡಾಗಿರುವುದು ಗುರುವಾರ ನಡೆದಿದೆ.

ಲಿಂಗಸುಗೂರು ತಾಲ್ಲೂಕು ಯಲಗಲದಿನ್ನಿ ಗ್ರಾಮದ ಹೊರವಲಯದಲ್ಲಿ ಗಜದಂಡಸ್ವಾಮಿ ತ್ರಿಪುರಾಂತಯ್ಯ (49) ಶವ ಪತ್ತೆಯಾಗಿದೆ. ತಲೆಗೆ ಬಲವಾಗಿ ಕಲ್ಲು ಅಥವಾ ಶಸ್ತ್ರದಿಂದ ಹೊಡೆತ ಬಿದ್ದಿದೆ. ಇವರು ಲಿಂಗಸುಗೂರು ತಾಲ್ಲೂಕು ಕೋಠ ಗ್ರಾಮದವರಾಗಿದ್ದು, ಅದೇ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಯಿಂದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿದ್ದರು.

ಕೊಲೆಗೆ ಕಾರಣ ಗೊತ್ತಾಗಿಲ್ಲ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದಲ್ಲಿ ಮನೆಯಲ್ಲಿ ಮಲಗಿದ ಜಾಗದಲ್ಲೇ ಕುತ್ತಿಗೆ ಮತ್ತು ಹೊಟ್ಟೆ ಭಾಗಗಳಲ್ಲಿ ಸೀಳಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಶವವಾಗಿದ್ದಾರೆ.
ಬಸವರಾಜ ಹೊನ್ನಪ್ಪ (37) ಕೊಲೆಯಾದವರು. ಅನೈತಿಕ ಸಂಬಂಧ ಕೊಲೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.