ರಾಯಚೂರು: ಶಿಕ್ಷಕಿಗೆ ಅಶ್ಲೀಲ ಸಂದೇಶ ಕಳಿಸಿದ ರಾಯಚೂರಿನ ಯರಮರಸ್‌ನ ಸರ್ಕಾರಿ ಆದರ್ಶ ವಿದ್ಯಾಲಯ ಪ್ರೌಢ ಶಾಲೆಯ ಸಹ ಶಿಕ್ಷ ಮೆಹಬೂಬ್ ಅಲಿಯನ್ನು ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪದ ಆರೋಪದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಹ ಶಿಕ್ಷಕನಿಂದ ಕಿರುಕುಳಕ್ಕೆ ಒಳಗಾದ ಶಿಕ್ಷಕಿ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಕೊಟ್ಟಿದ್ದರು. ಇದನ್ನು ಪರಿಶೀಲಿಸಿ ಮೆಹಬೂಬ್ ಅಲಿ ಅವರೇ ಬರೆದುಕೊಟ್ಟ ತಪ್ಪೊಪ್ಪಿಗೆ ಪತ್ರವನ್ನು ಉಲ್ಲೇಖಿಸಿ ಶಿಕ್ಷಣಾಧಿಕಾರಿ ಅಮಾನತಿಗೆ ಶಿಫಾರಸು ಮಾಡಿದ್ದರು.
ಬಿಇಒ ನೀಡಿದ ವರದಿಯನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ ಅವರು ಮೆಹಬೂಬ ಅಲಿಯನ್ನು ಅಮಾನತು ಮಾಡಿದ್ದಾರೆ.