ಮಂಗಳವಾರ, ಜೂನ್ 2, 2020
27 °C

ರಾಯಚೂರು: ಮಣ್ಣಿನ ಸುಗಂಧ ಹರಡಿದ ಅಲ್ಪ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಕೂಡಾ ಅಕಾಲಿಕವಾಗಿ ಸುರಿದ ಅಲ್ಪಕಾಲದ ಮಳೆಯಿಂದಾಗಿ ಭತ್ತ ಬೆಳೆದಿರುವ ರೈತರು ಆತಂಕಕ್ಕೊಳಗಾದರು. ಇನ್ನೊಂದೆಡೆ, ಮಳೆಯಿಂದಾಗಿ ಮಣ್ಣಿನ ಸುಗಂಧವು ತಂಗಾಳಿಯಲ್ಲಿ ತೇಲಿ ಬರುತ್ತಿರುವುದು ಬೇಸಿಗೆಯಲ್ಲಿ ಮುದ ನೀಡುತ್ತಿದೆ. 

ಕವಿತಾಳ ಹೋಬಳಿ ಹಾಗೂ ಮಸ್ಕಿ ಹೋಬಳಿ ಸುತ್ತಮುತ್ತಲೂ 15 ನಿಮಿಷ ಬಿರುಸಾಗಿ ಮಳೆ ಸುರಿದಿದೆ. ರಸ್ತೆ ಅಕ್ಕಪಕ್ಕದ ತಗ್ಗು ಗುಂಡಿಗಳಲ್ಲಿ ನೀರು ತುಂಬಿದೆ. ಬಡಾವಣೆಯ ಸಿಸಿ ರಸ್ತೆಗಳಲ್ಲಿ ನೀರು ಹರದಾಡುತ್ತಿದೆ. ನೀರಿಲ್ಲದೆ ಒಣಗುವ ಸ್ಥಿತಿಯಲ್ಲಿದ್ದ ಮರಗಳಲ್ಲಿ ಜೀವಕಳೆ ಕಾಣುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು