ಶನಿವಾರ, ಸೆಪ್ಟೆಂಬರ್ 21, 2019
21 °C

ರಾಯಚೂರು: ವಿವಿಧೆಡೆ ಸುರಿದ ಮಳೆ

Published:
Updated:
Prajavani

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಬಿರುಸಾಗಿ ಮಳೆ ಸುರಿಯಿತು.

ಶಕ್ತಿನಗರ, ಮಾನ್ವಿ, ದೇವದುರ್ಗ, ಜಾಲಹಳ್ಳಿ, ಕವಿತಾಳ ಹಾಗೂ ಸಿರವಾರದಲ್ಲಿ ಒಂದು ತಾಸಿಗೂ ಹೆಚ್ಚುಕಾಲ ಮಳೆ ಸುರಿದಿದ್ದರಿಂದ ತಂಪು ಹರಡಿತು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮಳೆಯು ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

ತಡರಾತ್ರಿವರೆಗೂ ತುಂತುರು ಮಳೆ ಮುಂದುವರಿದಿತ್ತು. ಗಣೇಶನ ಆಗಮನ ಪೂರ್ವ ಮಳೆ ಆರಂಭವಾಗಿರುವುದಕ್ಕೆ ರೈತ ಸಮುದಾಯದಲ್ಲಿ ಹರ್ಷ ಮೂಡಿದೆ. ಸಮರ್ಪಕವಾಗಿ ಮಳೆಯಾದರೆ ಹಿಂಗಾರು ಹಂಗಾಮಿನಲ್ಲಿ ಅಲ್ಪಾವಧಿ ಬೆಳೆಗಳನ್ನಾದರೂ ಬೆಳೆಯುವುದಕ್ಕೆ ನೆರವಾಗಲಿದೆ. 

Post Comments (+)