ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ವೃತ್ತಿ ಬದ್ಧತೆ ಮೆರೆದ ರಾಮಕೃಷ್ಣ’

Last Updated 15 ಮೇ 2019, 13:31 IST
ಅಕ್ಷರ ಗಾತ್ರ

ರಾಯಚೂರು: ನೇರ ನಡೆ-ನುಡಿ ಮತ್ತು ದಿಟ್ಟತನಕ್ಕೆ ಹೆಸರಾಗಿದ್ದ ಕಲ್ಲೂರು ರಾಮಕೃಷ್ಣ ಅವರು ವೃತ್ತಿ ಬದ್ಧತೆಯನ್ನು ಕಾಯ್ದುಕೊಂಡ ಒಬ್ಬ ಉತ್ತಮ ಪತ್ರಕರ್ತರಾಗಿದ್ದರು ಎಂದು ಈಚೆಗೆ ನಿಧನರಾದ ಪತ್ರಕರ್ತ ಕೆ. ರಾಮಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಮಹನೀಯರು ಮಾತನಾಡಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಈಚೆಗೆ ಶ್ರದ್ಧಾಂಜಲಿ ಸಭೆ ನಡೆಯಿತು.

ಪತ್ರಿಕೋದ್ಯಮವೇ ಅಲ್ಲದೆ, ಸಾಹಿತ್ಯ ಮತ್ತು ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ರಾಮಕೃಷ್ಣ ಅವರ ಬಹುಮುಖ ವ್ಯಕ್ತಿತ್ವ ಹೊಂದಿದ್ದರು ಎಂದರು.

ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ನರಸಿಂಹುಲು ವಡವಾಟಿ ಅವರು ಬಸವಣ್ಣನವರ ವಚನ ಹಾಡುವ ಮೂಲಕ ತಮ್ಮ ಭಾವನೆ ಹಂಚಿಕೊಂಡರು. ರಾಮಣ್ಣ ಹವಳೆ, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಶೀಲಾದಾಸ್, ಕೆ ಕರಿಯಪ್ಪ ಮಾಸ್ಟರ್, ಬಾಬು ಭಂಡಾರಿಗಲ್, ವೈ.ಕೆ. ಚಂದ್ರಶೇಖರಪ್ಪ, ಶಿವಬಸಪ್ಪ ಮಾಲಿಪಾಟೀಲ್, ಬಸವರಾಜ ಕಳಸ, ಗಣಾಚಾರಿ, ಜೆ. ಎಲ್ ಈರಣ್ಣ, ಭಗತರಾಜ ನಿಜಾಮಕಾರಿ, ಶರಣಪ್ಪ ಗೋನಾಳ, ಪಲಗುಲ ನಾಗರಾಜ, ಆಂಜನೇಯ ಜಾಲಿಬೆಂಚಿ, ಎನ್ ಶಿವಶಂಕರ ವಕೀಲರು, ಎನ್. ಮಹಾವೀರ, ಶಾಮಸುಂದರ ಪಟವಾರಿ, ರಮೇಶ ಕುಲಕರ್ಣಿ, ಜಯಕುಮಾರ ದೇಸಾಯಿ, ಎಸ್ ಮಾರೆಪ್ಪ, ಕರ್ನಾಟಕ ಸಂಘದ ಉಪಾಧ್ಯಕ್ಷ ಕೆ. ಶಾಂತಪ್ಪ, ಕಾರ್ಯದರ್ಶಿಗಳಾದ ಶ್ರೀನಿವಾಸ ಗಟ್ಟು, ಮುರಳೀಧರ ಕುಲಕರ್ಣಿ ಮಾತನಾಡಿದರು.

ಭೀಮನಗೌಡ ಇಟಗಿ, ಮಲ್ಲಿಕಾರ್ಜುನ ಶಿಖರಮಠ, ಅರುಣಾ ಹಿರೇಮಠ ಇದ್ದರು. ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT