ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿಘಾಟ್: ಮಳೆಯಿಂದ ರಸ್ತೆ ಕಾಮಗಾರಿ ವಿಳಂಬ

ಶಿರಾಡಿ ಘಾಟ್ ರಸ್ತೆ ಕಾಂಕ್ರೀಟೀಕರಣ
Last Updated 11 ಜೂನ್ 2018, 10:02 IST
ಅಕ್ಷರ ಗಾತ್ರ

ಸಕಲೇಶಪುರ: ಪಶ್ಚಿಮಘಟ್ಟದಲ್ಲಿ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್‍ನಲ್ಲಿ ನಡೆಯುತ್ತಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟೀಕರಣ ಕಾಮಗಾರಿಯೂ ವಿಳಂಬವಾಗಲಿದೆ.

ರಸ್ತೆ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ. ಕಾಮಗಾರಿ ಉದ್ದೇಶಕ್ಕಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಇದೇ ವರ್ಷದ ಜನವರಿ 20ರಿಂದ ಸಂಪೂರ್ಣವಾಗಿ ಬಂದ್‍ ಮಾಡಲಾಗಿದೆ.

ಕಾಮಗಾರಿ ಪ್ರಗತಿ: ಹೆದ್ದಾರಿಯ 250.620 ಕಿ.ಮೀಯಿಂದ 263 ಕಿ.ಮೀವರೆಗೆ ಒಟ್ಟು 12.38 ಕಿ.ಮೀ. ಉದ್ದದ ರಸ್ತೆಯ ಕಾಂಕ್ರೀಟೀಕರಣ ಹಾಗೂ ನಾಲ್ಕು ಸೇತುವೆ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿ ನಿರ್ವಹಿಸಲು ಗುತ್ತಿಗೆ ನೀಡಲಾಗಿದೆ.

ನಾಲ್ಕು ಸೇತುವೆಗಳ ಕಾಮಗಾರಿ ಆಗಲೇ ಪೂರ್ಣಗೊಂಡಿದೆ. ತಡೆಗೋಡೆ ನಿರ್ಮಾಣ ಕಾಮಗಾರಿಯೂ ಸಹ ಶೇ 80 ಪೂರ್ಣಗೊಂಡಿದೆ. ಕೇವಲ 700 ಮೀಟರ್ ರಸ್ತೆಗೆ ಕಾಂಕ್ರೀಟ್‍ ಹಾಕುವ ಕಾಮಗಾರಿ ಬಾಕಿ ಉಳಿದಿದೆ.

'ನಾವು ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಜೂನ್‍ 15ರೊಳಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಉದ್ದೇಶಿಸಿದ್ದೆವು.ನಾಲ್ಕು ದಿನ ಮಳೆ ಬಿಡುವು ನೀಡಿದರೆ ಬಾಕಿ ಕಾಮಗಾರಿ ಮುಗಿಯಲಿದೆ. ಮಳೆ ಹಿನ್ನೆಲೆಯಲ್ಲಿ 10 ದಿನಗಳಿಂದ ಕಾಮಗಾರಿ ಸ್ಥಗಿತವಾಗಿದೆ’ ಎಂದು ಓಷನ್‍ ಕನ್ಟ್ರಕ್ಷನ್‍ ಕಂಪನಿ ನಿರ್ದೇಶಕ ಶರ್ಫುದ್ದೀನ್ 'ಪ್ರಜಾವಾಣಿ'ಗೆ ಹೇಳಿದರು.

‘ಮಳೆ ಬಿಡುವುಕೊಟ್ಟಂಎ ಕೆಲಸ ಮಾಡುತ್ತಿದ್ದೇವೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ನಾವೂ ಕಾತುರರಾಗಿದ್ದೇವೆ. ಒಂದು ವಾರ ಮಳೆ ಬಿಡುವು ನೀಡಿದರೆ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತವಾಗಿಸಲು ಸಾಧ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT