ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಚಾವಣಿ ಕುಸಿದು ವಿದ್ಯಾರ್ಥಿ ತಲೆಗೆ ಗಾಯ

Published 12 ಜೂನ್ 2024, 14:35 IST
Last Updated 12 ಜೂನ್ 2024, 14:35 IST
ಅಕ್ಷರ ಗಾತ್ರ

ಕವಿತಾಳ: ಪಾತಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾಣಿಯ ಸಿಮೆಂಟ್‌ ಮಂಗಳವಾರ ಕಳಚಿ ಬಿದ್ದ ಪರಿಣಾಮ ತರಗತಿಯಲ್ಲಿ ಕುಳಿತಿದ್ದ ಚಂದನ ಬಸವರಾಜ ಎಂಬ ಮಗುವಿನ ತಲೆಗೆ ಪೆಟ್ಟಾಗಿದೆ.

ಸತತ ಮಳೆಗೆ ಶಾಲೆಯ ಮೂರು ಕೊಠಡಿಗಳು ಸೋರುತ್ತಿದ್ದು ಮಕ್ಕಳು ಅಪಾಯ ಎದುರಿಸುವಂತಾಗಿದೆ ಎಂದು ಪಾಲಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜೀವನ್‌ ಸಾಬ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕೊಠಡಿಗಳು ಸೋರುತ್ತಿದ್ದು ತಾತ್ಕಾಲಿಕವಾಗಿ ಗ್ರಾಮದ ಕರಿಲಿಂಗೇಶ್ವರ ದೇವಸ್ಥಾನದಲ್ಲಿ ತರಗತಿ ನಡೆಸುವಂತೆ ಸೂಚಿಸಿದರು.

ಈಗಾಗಲೇ ಹೆಚ್ಚುವರಿ ಕೊಠಡಿಗಳು ಮಂಜೂರಾಗಿದ್ದು ಕಾಮಗಾರಿ ಆರಂಭಿಸಬೇಕಿದೆ. ಮಳೆಗಾಲ ಮುಗಿಯುವವರಗೆ ಬೇರೆಡೆ ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ತಿಳಿಸಿದರು.

’ಮಗುವಿನ ತಲೆಗೆ ಸಿಮೆಂಟ್‌ ಪದರು ಬಿದ್ದಿದ್ದು ಗಂಭೀರ ಗಾಯವಾಗಿಲ್ಲ’ ಎಂದು ಶಿಕ್ಷಕ ಮೋಹನ ಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT