ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

ಅತಿಥಿ ಉಪನ್ಯಾಸಕರಿಂದ ಪ್ರತಿಭಟನಾ ಮೆರವಣಿಗೆ
Last Updated 1 ಜನವರಿ 2022, 13:11 IST
ಅಕ್ಷರ ಗಾತ್ರ

ಸಿಂಧನೂರು: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ ತಾಲ್ಲೂಕು ಘಟಕ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರೆವಣಿಗೆ ನಡೆಸಿತು.

‘ಕಳೆದ 20 ವರ್ಷಗಳಿಂದ ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರಾಗಿ ಸುಮಾರು 14500 ಅತಿಥಿ ಉಪನ್ಯಾಸಕರು 430 ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 10 ರಿಂದ ಅತಿಥಿ ಉಪನ್ಯಾಸಕರೆಲ್ಲರೂ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದರೂ ಯಾವುದೇ ಸ್ಪಂದನೆ ನೀಡಿಲ್ಲ. ಇದರಿಂದ ಶೈಕ್ಷಣಿಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಶೀಘ್ರ ಅತಿಥಿ ಉಪನ್ಯಾಸಕ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಉಪನ್ಯಾಸಕ ಚಂದ್ರಶೇಖರ ಗೊರೇಬಾಳ ಒತ್ತಾಯಿಸಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ಹಾಗೂ ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ₹ 20 ಲಕ್ಷ ಪರಿಹಾರ ಜೊತೆಗೆ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಆರೋಗ್ಯ ವಿಮೆ, ಭವಿಷ್ಯ ನಿಧಿ, ಯುಜಿಸಿ ನಿಯಮದಂತೆ ವೇತನ ನೀಡಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಚಳವಳಿ ನಡೆಸಬೇಕಾಗುತ್ತದೆ ಎಂದು ಕಾರ್ಯದರ್ಶಿ ರಾಮಣ್ಣ ಹಿರೇಬೇರಿಗಿ ಹಾಗೂ ಉಪನ್ಯಾಸಕ ಎರಿಯಪ್ಪ ಬೆಳಗುರ್ಕಿ ಎಚ್ಚರಿಸಿದರು.

ಶಿರಸ್ತೇದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು.

ಗೌರವಾಧ್ಯಕ್ಷ ಡಾ.ಎಂ.ಎಸ್.ಹಂಚಿನಾಳ, ಉಪಾಧ್ಯಕ್ಷ ವಿ.ಸಿ.ಪಾಟೀಲ್, ಸದಸ್ಯರಾದ ಡಾ.ಬಸವರಾಜ ಬಳಿಗಾರ, ಡಾ.ಮದಗಪ್ಪ, ಶಂಕರ ಗುರಿಕಾರ, ಡಾ.ಅರುಣಕುಮಾರ, ಡಾ.ಬಸವರಾಜ ನಾಯಕ, ಪರಶುರಾಮ ಮಲ್ಲಾಪುರ, ವಿಶ್ವನಾಥ ಗೋನಾಳ, ಶೋಭಾ, ಚನ್ನಬಸಮ್ಮ, ಮೇರಿಗ್ರೇಸಿ, ಸುನೀತಾ, ಸುಜಾತಾ, ಪ್ರಶಾಂತಿ, ನರಸಣ್ಣ, ಕೃಷ್ಣ ಗಾಂಧಿನಗರ, ಚಿದಾನಂದಪ್ಪ, ಶಂಕರ ವಾಲೇಕಾರ್, ಆಂಜನೇಯ ತುರ್ವಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT