ರಾಯಚೂರು: ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸಲು ರೂಪಿಸಿರುವ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್ ಯಂತ್ರದ ಬಳಕೆಗೆ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಯಚೂರ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಬುಧವಾರ ಚಾಲನೆ ನೀಡಿದರು.

‘ರಾಜ್ಯದಲ್ಲೇ ಮೊದಲ ಬಾರಿಗೆ ಕ್ಯಾಮೆರಾಗಳಿರುವ ನೂತನ ಯಂತ್ರವನ್ನು ಬಳಕೆಗೆ ತಂದ ಹೆಗ್ಗಳಿಕೆಗೆ ರಾಯಚೂರು ಮಹಾನಗರ ಪಾಲಿಕೆ ಪಾತ್ರವಾಗಿದೆ. ಸಾರ್ವಜನಿಕ ಸೇವಾ ಕಾರ್ಯಗಳನ್ನು ಸುಧಾರಿಸುವಲ್ಲಿ ಈ ಯಂತ್ರವು ಪ್ರಮುಖ ಪಾತ್ರ ವಹಿಸಲಿದೆ’ ಎಂದು ತಿಳಿಸಿದರು.

‘ರಾಯಚೂರನ್ನು ಸ್ವಚ್ಛ, ಸುಂದರ ಹಾಗೂ ಸ್ಮಾರ್ಟ್ ನಗರ ಮಾಡಬೇಕು ಎನ್ನುವ ಸಂಕಲ್ಪ ಮಾಡಲಾಗಿದೆ. ಈ ದಿಶೆಯಲ್ಲಿ ಹೊಸ ಪ್ರಯೋಗ ಮಾಡಲಾಗಿದೆ’ ಎಂದು ಹೇಳಿದರು.

‘ಭಾರತೀಯ ಡೀಪ್ಟೆಕ್ ಕಂಪನಿ ಜೆನ್ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಬ್ಯಾಂಡಿಕೂಟ್ ಯಂತ್ರವು ಮಾನವ ಚಲನೆಯನ್ನು ಅನುಕರಿಸುತ್ತದೆ. ಮಾನವ ಪ್ರವೇಶವಿಲ್ಲದೆ ಮ್ಯಾನ್ಹೋಲ್ಗಳನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಅನುವು ಮಾಡಿಕೊಡುತ್ತದೆ. ಅಪಾಯಕಾರಿ ಅನಿಲಗಳನ್ನು ಪತ್ತೆಹಚ್ಚಲು ವಿಷಕಾರಿ ಅನಿಲ ಸಂವೇಧಕಗಳು ಮತ್ತು ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಳಿಗಾಗಿ ಮಹತ್ವದ ಕ್ಯಾಮೆರಾಗಳನ್ನು ಸಹ ರೋಬೋಟ್ ಹೊಂದಿದೆ’ ಎಂದು ತಿಳಿಸಿದರು.

ಪಾಲಿಕೆಯ ಪ್ರಭಾರ ಮೇಯರ್ ಸಾಜೀದ್ ಸಮೀರ್ ಹಾಗು ಪಾಲಿಕೆಯ ಸದಸ್ಯರು ಹಾಗೂ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.