ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತು, ಸಮಯ ಪಾಲನೆಗೆ ಆದ್ಯತೆ ನೀಡಿ: ಮಾರ್ಟಿನ್‍ ಅಮಲ್ ರಾಜ್

Last Updated 1 ಜೂನ್ 2022, 12:04 IST
ಅಕ್ಷರ ಗಾತ್ರ

ಪಾಮನಕಲ್ಲೂರು (ಕವಿತಾಳ): ‘ಶಿಸ್ತು ಮತ್ತು ಸಮಯ ಪಾಲನೆಯ ಮೂಲಕ ಶಿಕ್ಷಕರು ಇತರರಿಗೆ ಮಾದರಿಯಾಗಬೇಕು’ ಎಂದು ಮುಖ್ಯಶಿಕ್ಷಕ ಮಾರ್ಟಿನ್‍ ಅಮಲ್ ರಾಜ್ ಹೇಳಿದರು.

ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಉರ್ದು ಶಾಲೆಯ ಶಿಕ್ಷಕ ಮೋಹನ್‍ ಕಲಾಲ್‍ ಅವರು ನಿವೃತ್ತರಾದ ಕಾರಣ ಮಂಗಳವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು,‘ಕಲಿಕೆಯ ಜತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು’ ಎಂದರು.

ನಿವೃತ್ತ ಶಿಕ್ಷಕರಾದ ಪ್ರೇಮ್ ಸಿಂಗ್, ವರ್ಗಾವಣೆಯಾದ ಸಂಪನ್ಮೂಲ ವ್ಯಕ್ತಿ ಉಮೇಶ ಸೊಬರದ, ನೂತನ ಸಂಪನ್ಮೂಲ ವ್ಯಕ್ತಿ ಸೋಮಪ್ಪ ಚಿಗರಿ ಮತ್ತಿತರರನ್ನು ಸನ್ಮಾನಿಸಲಾಯಿತು.

ಬಿಆರ್‌ಪಿ ಸತೀಶಕುಮಾರ, ನೌಕರರ ಸಂಘದ ಅಮರಗುಂಡಪ್ಪ, ಶಿಕ್ಷಕರಾದ ಮಾಲತೇಶ, ಸುಭಾಶ್ಚಂದ್ರ, ಮಹೇಶ ಹೊಸೂರು, ಮಹಾಮುನೆಪ್ಪ, ಬಸನಗೌಡ, ಎಸ್ ಡಿಎಂಸಿ ಅಧ್ಯಕ್ಷ ಶಶಿಧರ ಜಂಗಮರಹಳ್ಳಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT