ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ

ಬುಧವಾರ, ಜೂಲೈ 24, 2019
27 °C

ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ

Published:
Updated:
Prajavani

ರಾಯಚೂರು: ಭಾರತ ಸೇವಾದಳದಲ್ಲಿರುವ ಮಕ್ಕಳು ಶಿಸ್ತು, ರಾಷ್ಟ್ರಪ್ರೇಮ  ಹಾಗೂ ಸೇವಾಮನೋಭಾವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಟಮಾರಿಯ ಮಹಾಂತೇಶ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ವಿಶ್ವನಾಥರೆಡ್ಡಿ ಹೇಳಿದರು.

ತಾಲ್ಲೂಕಿನ ಮಟಮಾರಿ ಮಹಾಂತೇಶ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಭಾರತ ಸೇವಾದಳ ಎಂ.ನಾಗಪ್ಪ ವಕೀಲರ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಸ್ತಿಗೆ ಹೆಸರಾದ ಸ್ವಾಂತಂತ್ರ್ಯ ಹೋರಾಟಗಾರದ ಎಂ. ನಾಗಪ್ಪ ವಕೀಲರ ಹೆಸರಿನಲ್ಲಿ ಭಾರತ ಸೇವಾದಳ ಶಾಖೆ ಪ್ರಾರಂಭವಾಗುತ್ತಿರುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಶಿಕ್ಷಕ ತಾರಾನಾಥ ಜೇಗರಕಲ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಿದ ಸೇವಾದಳ ಇಲ್ಲಿಯವರೆಗೂ ಅದರ ತತ್ವ ಸಿದ್ಧಾಂತ ಕಾಪಾಡಿಕೊಂಡು ಬಂದಿದ್ದು, ಇದರಿಂದ ಮಕ್ಕಳಿಗೆ ಹಾಗೂ ಯುವಕರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು.

ಕನ್ನಡ ಉಪನ್ಯಾಸಕ ಗೋವರ್ದನರೆಡ್ಡಿ ಮಾತನಾಡಿ, ಸೇವಾದಳ, ಎನ್‌ಸಿಸಿ., ಎನ್‌ಎಸ್‌ಎಸ್ ಹಾಗೂ ಇನ್ನಿತರ ಸಂಘಟನೆಗಳು ಯುವಕರಲ್ಲಿ, ಮಕ್ಕಳಲ್ಲಿ ನಾಯಕತ್ವ ಗುಣ, ಸೇವಾಮನೋಭಾವನೆ ಬೆಳೆಸುತ್ತವೆ. ಆದ್ದರಿಂದ ಶಾಲೆಯಲ್ಲಿರುವ ಭಾರತ ಸೇವಾದಳ ಶಾಖೆ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಕ ಕುಮಾರ ಮಾತನಾಡಿ, ಸೇವಾದಳ ಮುಖಾಂತರ ಶಾಲೆಯಲ್ಲಿ ಶಿಸ್ತು, ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಅಭಿವೃದ್ದಿ ಸಮಿತಿ ಸದಸ್ಯರಾದ ನಾಗನಗೌಡ ಮುದಿಗೌಡ, ಅಬ್ದುಲ್ ನಬೀ, ನಾಗರಾಜ ಹಾಗೂ ಶಿಕ್ಷಕರಾದ ಗಂಗೂಬಾಯಿ, ಫಹಿಮುದಾ ಸುಲ್ತಾನ, ಇಂದಿರಾ ಇದ್ದರು.

ದೈಹಿಕ ಶಿಕ್ಷಕರಾದ ಶೇಖರಪ್ಪ ಸ್ವಾಗತಿಸಿದರು. ಭಾರತ ಸೇವಾದಳ ಜಿಲ್ಲಾ ಸಂಘಟಿಕರಾದ ವಿದ್ಯಾಸಾಗರ ಚಿಣಮಗೇರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಂತೋಷಕುಮಾರ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !