ಸಿರವಾರ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹಾಜಿ ಚೌದ್ರಿ ಅವರು ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಜಿ ಚೌದ್ರಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಅಧಿಕಾರಿ ಭೀಮರಾಯ ರಾಮಸಮುದ್ರ ಮಧ್ಯಾಹ್ನ ಅವಿರೋಧ ಆಯ್ಕೆ ಘೋಷಿಸಿದರು.

ಹಾಲಿ ಅಧ್ಯಕ್ಷ ವೈ.ಭೂಪನಗೌಡ ಅವರು, ಮೊದಲ ಅವಧಿಯ ಅಧಿಕಾರದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರಂತೆ 3ನೇ ವಾರ್ಡ್ನ ಸದಸ್ಯ ಕಾಂಗ್ರೆಸ್ನ ಹಿರಿಯ ನಾಯಕ ಹಸೇನ್ ಅಲಿ, ಅಧ್ಯಕ್ಷರಾಗಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಆದರೆ ಏಕಾಏಕಿ ಹೈಕಮಾಂಡ್ ನಿರ್ಧಾರದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿತು. ಪಟ್ಟಣ ಪಂಚಾಯಿತಿಯ 20 ಸದಸ್ಯರಲ್ಲಿ 36 ವರ್ಷದ ಹಾಜಿ ಚೌದ್ರಿ ಅತಿ ಕಿರಿಯ ಸದಸ್ಯ. 6ನೇ ವಾರ್ಡ್ನಿಂದ ಗೆದ್ದಿರುವ ಹಾಜಿ ಅವರು, ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.

ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಶಾಸಕ ಜಿ.ಹಂಪಯ್ಯ ನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಿಹಿ ಹಂಚಿ, ಸನ್ಮಾನಿಸಿ ಗೌರವಿಸಿದರು.

ಮುಖಂಡರಾದ ಶಿವಕುಮಾರ ಚುಕ್ಕಿ, ನಿರ್ಮಲಾ ಬೆಣ್ಣೆ, ಎಂ.ಶ್ರೀನಿವಾಸ, ದಾನನಗೌಡ, ಉಮಾಪತಿ ಚುಕ್ಕಿ, ಶಿವಶರಣ ಅರಕೇರಿ, ಲಕ್ಷಿಕಾಂತ, ಎಚ್.ಕೆ. ಅಮರೇಶ, ನಿಂಬಯ್ಯ ಸ್ವಾಮಿ, ಸದಸ್ಯರಾದ ಸೂರಿ ದುರುಗಣ್ಣ ನಾಯಕ, ಹಸೇನ ಅಲಿ, ಮೌಲಸಾಬ್ ವರ್ಚಸ್, ಚನ್ನಪ್ಪ ಗಡ್ಲ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಹಾಜರದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.