ಭಾನುವಾರ, ಏಪ್ರಿಲ್ 18, 2021
24 °C

‘ಸಮಾಜಮುಖಿ ಕೃತಿಗಳು ಹೊರಬರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಬೆನ್ನಿಗಂಟಿದ ನೆರಳು’ ಕವನ ಸಂಕಲನ ಹೊರತಂದಿರುವ ನಾಗರಾಜ ವಲ್ಕಂದಿನ್ನಿ ಕೇವಲ ಕವಿಯಲ್ಲ. ಒಳ್ಳೆಯ ಕಥೆಗಾರ ಹಾಗೂ ನಾಟಕಕಾರರಾಗಿ ಸೇವೆ ಮಾಡುತ್ತಿದ್ದಾರೆ‘ ಎಂದು ಗಂಗಾವತಿಯ ಸಾಹಿತಿ ಅಜಮೀರ ನಂದಾಪುರ ಅವರು ಹೇಳಿದರು.

ನಗರದ ಕನಕದಾಸ ಪದವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಾಚಾರ್ಯ ನಾಗರಾಜ ವಲ್ಕಂದಿನ್ನಿ ಅವರ ಎರಡನೇಯ ಕೃತಿ ‘ಬೆನ್ನಿಗಂಟಿದ ನೆರಳು’ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಅವಲೋಕನ ಮಾಡಿ ಮಾತನಾಡಿದ ಅವರು, ಕೃತಿಕಾರರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಹೆಚ್ಚಿನ ಸಮಾಜಮುಖಿ ಕೃತಿಗಳು ಹೊರಬರಲಿ ಎಂದು ಅವರು ಹೇಳಿದರು.

‘ಬೆನ್ನಿಗಂಟಿದ ನೆರಳು’ ಕವನ ಸಂಕಲನ ಲೋಕಾರ್ಪಣೆ ಮಾಡಿದ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚೆನ್ನಬಸಪ್ಪ ಚಿಲ್ಕರಾಗಿ ಅವರು, ‘ಸಿಂಧನೂರು ಕೇವಲ ಭತ್ತ ಬೆಳೆಯುವ ಪ್ರದೇಶವಲ್ಲ. ಕನ್ನಡ ಸಾಹಿತ್ಯದ ಮೌಲ್ಯಯುತ ಕೃತಿಗಳನ್ನು ಹೊರತರುತ್ತಿರುವ ಪ್ರದೇಶವಾಗಿದೆ’ ಎಂದರು.

ಉಪನ್ಯಾಸಕ ಡಾ.ಹನುಮಂತ ಚಂದ್ಲಾಪೂರ, ಕೃತಿಕಾರ ನಾಗರಾಜ ವಲ್ಕಂದಿನ್ನಿ ಮಾತನಾಡಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಹಿರೇಲಿಂಗಪ್ಪ,  ಪ್ರಾಚಾರ್ಯ ಸಿದ್ದಪ್ಪ ಖೈರವಾಡಗಿ,  ಉಪನ್ಯಾಸಕ ಚಂದ್ರಶೇಖರ,  ಮಹಿಬೂಬ ಮಂತ್ರಿ ಇದ್ದರು. ಉಪನ್ಯಾಸಕ ರಾಮಣ್ಣ ಹಿರೇಬೇರಿಗಿ ಕೃತಿಕಾರ ನಾಗರಾಜ ವಲ್ಕಂದಿನ್ನಿ ಅವರ ಪರಿಚಯ ಮಾಡಿದರು. ದುರುಗೇಶ ಪ್ರಾರ್ಥಿಸಿದರು. ನಂದಿನಿ ಗೋಗಿ ಸ್ವಾಗತಿಸಿದರು. ಯರಿಯಪ್ಪ ನಿರೂಪಿಸಿದರು. ಚಂದ್ರಶೇಖರ ಸ್ವಾಗತಿಸಿ, ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.