ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಕಸ ವಿಲೇವಾರಿ ಘಟಕ ಆರಂಭ

ನರೇಗಾ ಯೋಜನೆಯಲ್ಲಿ ಅಡವಿಭಾವಿ ಗ್ರಾಮ ಪಂಚಾಯಿತಿಯ ಕಾರ್ಯ
Last Updated 20 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಸ್ಕಿ: ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಒಂದಿದ್ದರೆ ಏನು ಬೇಕಾದರೂ ಮಾಡಿ ತೋರಿಸಬಹುದು ಎಂಬುದಕ್ಕೆ ತಾಲ್ಲೂಕಿನ ಅಡವಿಭಾವಿ ಗ್ರಾಮ ಪಂಚಾಯಿತಿ ಒಂದು ಉದಾಹರಣೆಯಾಗಿ ಜಿಲ್ಲೆಗೆ ಮಾದರಿ ಪಂಚಾಯಿತಿಯಾಗಿದೆ.

ಆರು ಗ್ರಾಮಗಳನ್ನು ಒಳಗೊಂಡಿರುವ ಅಡವಿಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಸಾವಿರದಷ್ಟು ಜನ ಸಂಖ್ಯೆ ಇದೆ. ಆರು ಗ್ರಾಮಗಳಲ್ಲಿನ ಮನೆ ಮನೆಗೆ ತೆರಳಿ ಕಸ ಹಾಗೂ ತ್ಯಾಜ್ಯವನ್ನು ಸಂಗ್ರಹಿಸುವ ಗ್ರಾಮ ಪಂಚಾಯಿತಿ ನೆರವಾಗಿ ಅದನ್ನು ಕಸ ವಿಲೇವಾರಿ ಘಟಕಕ್ಕೆ ಸಾಗಿಸುತ್ತದೆ.

ಹಸಿ ಮತ್ತು ಒಣ ತ್ಯಾಜ್ಯದ ಜೊತೆಗೆ ಪ್ಲಾಸ್ಟಿಕ್, ಬಾಟಲ್, ಗ್ರಾಮಾಂತರ ಪ್ರದೇಶಗಳಲ್ಲಿ ಸವಲಾಗಿರುವ ರಸ್ತೆ ಬದಿಯಲ್ಲಿ ಬಿಸಾಡಿರುವ ಆಸ್ಪತ್ರೆಯ ತ್ಯಾಜ್ಯಗಳನ್ನು ಸಂಗ್ರಹಿಸುವ ಗ್ರಾಮ ಪಂಚಾಯಿತಿ ಆರು ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯಕ್ಕೆ ಬಳಸಿಕೊಂಡಿದ್ದು ನರೇಗಾ ಯೋಜನೆಯನ್ನು.

ನರೇಗಾ ಯೋಜನೆಯಲ್ಲಿ ಕಸ ವಿಲೇವಾರಿ ಘಟಕಕ್ಕಾಗಿ ಅಡವಿಭಾವಿ ತಾಂಡಾದ ಬಳಿ ₹ 30 ಲಕ್ಷ ವೆಚ್ಚದಲ್ಲಿ ಟೈಮಂಡ್ ಪೆನ್ಸಿಂಗ್ (ತಡೆಗೋಡೆ) ನಿರ್ಮಿಸಲಾಗಿದೆ ಅಡವಿಭಾವಿ ತಾಂಡಾದ ಕೂಲಿ ಕಾರ್ಮಿಕರನ್ನೇ ಈ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. 845 ಮಾನವ ದಿನಗಳನ್ನು ಬಳಕೆ ಮಾಡಿಕೊಂಡು ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಯೋಜನೆಯ ರುವಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಪಾಟೀಲ್ ತಿಳಿಸಿದ್ದಾರೆ.

ತಾಂಡಾದ ಕಿತ್ತೂರು ಚೆನ್ನಮ್ಮ ಮಹಿಳಾ ಒಕ್ಕೂಟದ ಲಲಿತಾ, ಲಕ್ಷ್ಮೀ, ಸರೋಜಾ ಹಾಗೂ ವಾಹನ ಚಾಲಕಿ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಜಸ ನಿರ್ವಹಣೆ ಕುರಿತು ತರಬೇತಿ ಪಡೆಸುಕೊಂಡು ಬಂದಿದ್ದರಿಂದ ಘಟಕ ಆರಂಭಿಸಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

ಆಧುನಿಕ ಬೇಲಿಂಗ್‌ಯಂತ್ರ ಪೂರೈಕೆ

ಪ್ಲಾಸ್ಟಿಕ್‌ತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ಬೇಲಿಂಗ್‌ ಯಂತ್ರಬಂದಿದ್ದು, ಘಟಕದಲ್ಲಿ ಅಳವಡಿಸಿದ ಬಳಿಕ ಸೋಲಾರ್‌ಮೂಲಕ ಯಂತ್ರಕಾರ್ಯನಿರ್ವಹಿಸಲಿದೆ. ಘಟಕದ ಆವರಣದಲ್ಲಿ ನಾಲ್ಕುಕಾಂಪೋಸ್ಟ್ ಗೊಬ್ಬರ ಘಟಕ ನಿರ್ಮಿಸಲು ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಮನೆ ಮನೆಗೆ ಬಕೆಟ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕಂಪೋಸ್ಟ್‌ ಗೊಬ್ಬರ ತಯಾರಿಸಲು ಉದ್ದೇಶಿಸಲಾಗಿದೆ.

ನರೇಗಾದಡಿ ಬಪ್ಪೂರು, ಗುಂಡ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ‍ಘಟಕ ನಿರ್ಮಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಅವಶ್ಯ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಸಮುದಾಯ ಆಧಾರಿತ ಕಾಮಗಾರಿಗೆ ಆದ್ಯತೆ ನೀಡಲಾಗಿದೆ
ಬಾಬುರಾಥೋಡ್‌, ಇಒ., ತಾಲೂಕು ಪಂಚಾಯಿತಿ, ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT