ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವರ್ಷಗಳಿಂದ ಉರಿಯದ ಬೀದಿ ದೀಪಗಳು

ಎಲ್ಲವೂ ಸರ್ಕಾರದ್ದಾದರೂ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ!
Last Updated 17 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದಗಣಿ: ದೇಶದಲ್ಲಿ ಚಾಲ್ತಿಯಲ್ಲಿ ಏಕೈಕ ಚಿನ್ನದ ಗಣಿ ಇರುವ ಹಟ್ಟಿ ಪಟ್ಟಣದಲ್ಲಿ ರಾತ್ರಿಯಾದರೆ ಸಾರ್ವಜನಿಕರು ಕಗ್ಗತ್ತಲಲ್ಲಿ ತಿರುಗಾಡಬೇಕಾದ ಪರಿಸ್ಧಿತಿ ಇದೆ.

ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದರೂ ದೀಪಗಳನ್ನು ಹಾಕಿ ನಿರ್ವಹಣೆ ಮಾಡುವ ವ್ಯವಸ್ಥೆ ಇಲ್ಲ. ಎಸ್‌ಎಫ್‌ಸಿ ಅನುದಾನದಲ್ಲಿ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಕಾಲೋನಿ ಮಾರ್ಗಗಳಲ್ಲಿ ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ, ಏಳು ವರ್ಷಗಳಿಂದ ನಿರುಪಯುಕ್ತವಾಗಿ ನಿಂತಿವೆ.

ಈ ವಿದ್ಯುತ್‌ ದೀಪಗಳ ನಿರ್ವಹಣೆಯನ್ನು ಹಟ್ಟಿಚಿನ್ನದ ಗಣಿ ಕಂಪನಿ ಮಾಡಬೇಕಿತ್ತು. ಗಣಿ ಆಡಳಿತ ವರ್ಗ ಮೀನಾಮೇಷ ಎಣಿಸುತ್ತಿದೆ.

ಕ್ಯಾಂಪ್‌ನಲ್ಲಿ ಹಾದು ಹೋಗುವ ಮುಖ್ಯರಸ್ತೆಗೆ, ಕೆಪಿಟಿಸಿಎಲ್ ಕಚೇರಿಯಿಂದ ಕಾಕಾನಗರ ಸೇತುವೆವರೆಗೆ, ಸಹಕಾರ ಸಂಘದಿಂದ ವಿಲೇಜ್‌ಶಾಫ್ಟ್ ವರೆಗೆ ಹಾಗೂ ಹೊಸ ಬಸ್ ನಿಲ್ದಾಣದಿಂದ ಲಿಂಗಾವದೂತ ದೇವಸ್ಧಾನದವರೆಗೆ ಹಾಗೂ ಕ್ರೀಡಾ ಸಂಸ್ಧೆಗೆ ಹೋಗುವ ರಸ್ತೆಗಳಲ್ಲಿ ಬೀದಿ ದೀಪಕ್ಕಾಗಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಎಸ್‌ಎಫ್‌ಸಿ ನಿಧಿಯಿಂದ ₹50 ಲಕ್ಷ ಮೊತ್ತದ ಕಾಮಗಾರಿ 2012ರಲ್ಲಿ ಟೆಂಡರ್ ಆಗಿತ್ತು. ಅದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಅಧಿಸೂಚಿತ ಪ್ರದೇಶ ಸಮಿತಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಿದೆ. ಅಂದರೆ ನಿರ್ವಹಣೆ ಮಾಡಬೇಕಾದ ಗಣಿ ಕಂಪನಿ ಹಾಗೂ ಅಧಿಸೂಚುತ ಪ್ರದೇಶ ಸಮಿತಿ ಒಬ್ಬರ ಮೇಲೋಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದರಿಂದ ಬೀದಿ ದೀಪಗಳು ನೆನೆಗುಂದಿಗೆ ಬಿದ್ದಿವೆ. ಅಂದಾಜು ೫೦ ಲಕ್ಷ ಖರ್ಚಮಾಡಿ ಅಳವಡಿಸಿದ ಬೀದಿ ದೀಪಕಂಬ ದೀಪಗಳು ಒಂದು ದಿನವೂ ಬೆಳಗದೆ ಬಿದುರಿನ ಗೊಂಬೆಯಂತೆ ನಿಂತಿವೆ.

ಕಳ್ಳರಿಗೆ ವರದಾನ : ಸಂಜೆಯಾದರೆ ಪ್ರಮುಖ ರಸ್ತೆಗಳು ಕತ್ತಲಿನಿಂದ ಕೂಡಿರುತ್ತದೆ. ಅಧಿಸೂಚಿತ ಪ್ರದೇಶದಲ್ಲಿ ಸುಮಾರು ಮೂರುಕ್ಕೂ ಹೆಚ್ಚು ಬ್ಯಾಂಕ್‌ ಶಾಖೆಗಳಲ್ಲಿ ಹಲವು ಸಲ ಕಳ್ಳತನ ಪ್ರಕರಣಗಳು ನಡೆದಿವೆ. ಪೋಲೀಸರು ಗಸ್ತು ಸಮರ್ಪಕವಾಗಿಲ್ಲ ಎನ್ನುವುದು ಜನರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT