ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ವಿಜ್ಞಾನ ಪರೀಕ್ಷೆ: 405 ಮಕ್ಕಳು ಹಾಜರು

Published 27 ಮಾರ್ಚ್ 2024, 16:27 IST
Last Updated 27 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ನಾರಾಯಣಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಒಟ್ಟು 405 ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ಕೇಂದ್ರದಲ್ಲಿ 413 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8 ವಿದ್ಯಾರ್ಥಿಗಳು ಗೈರಾಗಿದ್ದರು. ಇಲಾಖೆ ಸೂಚಿಸಿದಂತೆ ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ಪರೀಕ್ಷೆ ಜರುಗಿತು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಂಗಯ್ಯ ಬಿಕ್ಷಾವತಿಮಠ ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರಾಗಿ ಕೆಬಿಜೆಎನ್ಎಲ್‌ ಪ್ರಭಾರ ಎಇಇ ವಿಜಯ ಅರಳಿ, ಸ್ಥಾನಿಕ ಜಾಗೃತ ದಳದ ಅಧಿಕಾರಿ ಬಸವರಾಜ ಮಲ್ಲೆ ಹಾಗೂ ಕೊಡೇಕಲ್ ನಾಡ ಕಚೇರಿ ಉಪತಹಶೀಲ್ದಾರ್‌ ಕಲ್ಲಪ್ಪ ಜಂಜಿಗಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷಾ ಕೇಂದ್ರದ ಸುತ್ತಲು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.

ಮಂತ್ರಾಲಯ: ₹ 2.30 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ 29 ದಿನಗಳ ಅವಧಿಯಲ್ಲಿ ₹ 5.12 ಲಕ್ಷ ಮೊತ್ತದ ನಾಣ್ಯ ₹ 2.25 ಕೋಟಿ ಮೌಲ್ಯದ ನೋಟುಗಳು ಸೇರಿ ಒಟ್ಟು ₹ 2.30 ಕೋಟಿ ನಗದು ಸಂಗ್ರಹವಾಗಿದೆ. 81 ಗ್ರಾಂ ಚಿನ್ನ 848 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ರೂಪದಲ್ಲಿ ಬಂದಿವೆ. ಬುಧವಾರ ಬೆಳಿಗ್ಗೆ ಆರಂಭವಾಗಿದ್ದ ಎಣಿಕೆ ಕಾರ್ಯ ಸಂಜೆ ಪೂರ್ಣಗೊಂಡಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT