ಲೋಕಕಲ್ಯಾಣಾರ್ಥ ಮೆಟ್ಟಿಲುಗಳ ಮೇಲೆ ಸ್ವಾಮೀಜಿ ಉರುಳುಸೇವೆ

ಸಿಂಧನೂರು: ಧಾರವಾಡದ ರಾಜೀವಗಾಂಧಿನಗರದ ಓಂ ಶ್ರೀ ಭಂಡಾರದ ಒಡೆಯ ಹಾಗೂ ಆದಿಶಕ್ತಿ ಎಣ್ಣೆ ಹೊಳೆಯಮ್ಮ ದೇವಿ ದೇವಸ್ಥಾನದ ಮೈಲಾರಲಿಂಗ ಸ್ವಾಮಿ ಅವರು ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಬೆಟ್ಟದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಮೆಟ್ಟಿಲುಗಳ ಮೇಲೆಯೇ ಉರುಳುಸೇವೆ ಮಾಡಿದರು.
ಲೋಕ ಕಲ್ಯಾಣಾರ್ಥವಾಗಿ ಮಂಬರುವ ದಿನಗಳಲ್ಲಿ ಪ್ರಕೃತಿ ವಿಕೋಪಗಳು, ರೋಗ-ರುಜಿನುಗಳು ಮನುಕುಲಕ್ಕೆ ಪರಿಣಾಮ ಬೀರಬಾರದೆಂಬ ಪ್ರಾರ್ಥನೆಯೊಂದಿಗೆ ಉರುಳುಸೇವೆ ಮಾಡುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.
ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ 541 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಮೇಲೆ ಬಟ್ಟೆ ಹಾಕಲಾಗಿತ್ತು. ವಾಪಸ್ ಉರುಳುಸೇವೆ ಮಾಡುತ್ತಾ ಕೆಳಗಿಳಿದರು. ಆನಂತರ ತಾಲ್ಲೂಕಿನ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಕ್ಷೇತ್ರದಲ್ಲಿ ಉರುಳು ಸೇವೆ ಮಾಡಿ ದರ್ಶನ ಪಡೆದರು.
ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಬೆಟ್ಟವನ್ನೇರಿ ಪ್ರಾರ್ಥನೆ ಸಲ್ಲಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.