ಲಿಂಗಸುಗೂರು: 64 ದೇವತೆಗಳು ಮತ್ತು ನವಗ್ರಹ ಹೊಂದಿರುವ ತಾಲ್ಲೂಕಿನ ಯಲಗಲದಿನ್ನಿ ಗ್ರಾಮದ ಮಾತೆ ಮಾಣಿಕೇಶ್ವರಿ ಆಶ್ರಮದಲ್ಲಿ ವಿಶಿಷ್ಟವಾಗಿ ನಿರ್ಮಿಸಿರುವ ಶಿಲಾಮಂದಿರದಲ್ಲಿ ಸೋಮವಾರ (ನ.3) ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಶಿಲಾಮಂದಿರದಲ್ಲಿ 18 ಕಂಬಗಳಲ್ಲಿ 18 ದೇವಿ ಶಕ್ತಿ ಪೀಠದ ಅವತಾರಗಳು, ಪಂಚಮುಖಿ ಆಂಜನೇಯ, ಗಣೇಶ ಮೂರ್ತಿಗಳು, ಪ್ರತ್ಯಂಗಿರಾ ದೇವಿ, ವೀರಭದ್ರಸ್ವಾಮಿ, ಕಾಲಭೈರವ ಮೂರ್ತಿಗಳು, 18 ಲಿಂಗು, 18 ತ್ರಿಶೂಲಗಳನ್ನು ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ 5 ಅಡಿ ಎತ್ತರದ ನಾಗಸಿಂಹಾಸನ ಮೂರ್ತಿ, 18 ನಾಗದೇವತೆಗಳನ್ನು ನಿರ್ಮಿಸಲಾಗಿದೆ.

ಗರ್ಭಗುಡಿ ಕೆಳಗಡೆ ಧ್ಯಾನಮಂದಿರ ನಿರ್ಮಾಣ ಮಾಡಲಾಗಿದೆ. ಸೋಮವಾರ ಬೆಳಗಿನ ಜಾವ ನಾಗಸಿಂಹಾಸನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಮಾತೆ ಮಾಣಿಕೇಶ್ವರಿ ಆಶ್ರಮದ ನಂದಿಕೇಶ್ವರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.