ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಸಾಂಪ್ರದಾಯಿಕ ಕಲೆಯ ಅನಾವರಣ

Published 15 ಜನವರಿ 2024, 6:34 IST
Last Updated 15 ಜನವರಿ 2024, 6:34 IST
ಅಕ್ಷರ ಗಾತ್ರ

ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆವರಣದಲ್ಲಿ ನಡೆದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ–2024ಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಈ ಸಮಾವೇಶ ಕುರುಬ ಸಮುದಾಯದ ಸಂಸ್ಕೃತಿ, ಸಂಪ್ರದಾಯ ಹಾಗೂ ಸಮಾಜದ ಅಭಿವೃದ್ಧಿಯ ಮೇಲೆ ಬೆಳೆಕು ಚೆಲ್ಲಿತು.

ಮೊದಲ ದಿನ ಡೊಳ್ಳು, ಕಂಬಳಿ ಪೂಜೆ, ಡೊಳ್ಳಿನ ಗಾಯನ ಗಾಯನ ನಡೆದರೆ ಎರಡನೆಯ ದಿನ ಹೊಳೆ ಪೂಜೆ, ಪಲ್ಲಕ್ಕಿ ಮೆರವಣಿಗೆ, ಅಭಿಷೇಕ ಕಾರ್ಯಕ್ರಮಗಳು ನಡೆದವು. ಶನಿವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಹಾಲುಮತ ಭಾಸ್ಕರ ಪ್ರಶಸ್ತಿ ಹಾಗೂ ಕನಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾಜದ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುವಂತಹ ವಿಚಾರ ಗೋಷ್ಠಿಗಳು ಹಾಗೂ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಸಾವಯವ ಕೃಷಿ ಉತ್ಪನ್ನ ಸಿರಿಧಾನ್ಯ ಮಳಿಗೆ, ಉಣ್ಣೆ ಉತ್ಪನ್ನ ಮಳಿಗೆಗಳ ಮೂಲಕ ಕುರಿಗಾರಿಗೆ ತಿಳಿವಳಿಕೆ ನೀಡುವ ಕಾರ್ಯವೂ ನಡೆಯಿತು.

ಕಾಳಿದಾಸ ವಸತಿ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು ವಾದನ, ಡೊಳ್ಳು ಕುಣಿತವು ಹಾಲುಮತ ಸಂಸ್ಕೃತಿ ವೈಭವಕ್ಕೆ ಕಳೆಕಟ್ಟಿತ್ತು. ಕುರುಬ ಸಮುದಾಯದ ಗ್ರಾಮೀಣ ಮಹಿಳೆಯರು ಧಡಿ ಸೀರೆಗಳನ್ನು ತೊಟ್ಟು ಸಮಾವೇಶಕ್ಕೆ ಬಂದಿದ್ದರೆ, ಪುರುಷರು ಧೋತರ, ಬಿಳಿ ಅಂಗಿ ಹಾಗೂ ಹಳದಿ ಬಣ್ಣದ ಪೇಟಾ ಧರಿಸಿದ್ದರು. ಉಡುಗೆ ತೊಡಿಗೆಗಳ ಮೂಲಕವೇ ಸಂಪ್ರದಾಯ ಬಿಂಬಿಸಲಾಯಿತು.

ಬಾಲಕನೊಬ್ಬ ಮುಖ್ಯ ವೇದಿಕೆಯಲ್ಲಿ ಯೋಗದ ಕಠಿಣ ಆಸನಗಳನ್ನು ಸರಳವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರು ಮೂಗಿನ ಮೇಲೆ ಬೆರೆಳೆ ಇಟ್ಟುವಂತೆ ಮಾಡಿದ.

ಟಗರಿನ ಕಾಳಗ ವೀಕ್ಷಣೆ ಯುವಕರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಎರಡು ಟಗರುಗಳ ಮಾಲೀಕರು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಉತ್ಸವದಲ್ಲಿ ಸೇರಿದವರು ಕುತೂಹಲದಿಂದ ಟಗರಿನ ಕಾಳಗ ವೀಕ್ಷಿಸಿದರು. ಕಾಳಗದಲ್ಲಿ ವಿಜೇತ ಟಗರಿನ ಮಾಲೀಕನಿಗೆ ಸಿದ್ದರಮಾನಂದ ಸ್ವಾಮೀಜಿ ಅವರು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.

‘ಹಾಲುಮತ ಸಂಸ್ಕೃತಿ ವೈಭವ’ದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲದೇ ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದಲೂ ಜನ ಬಂದಿದ್ದರು. ಅವರಿಗೆ ಮಠದ ಆವರಣದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ವರಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮೂರು ದಿನಗಳ ಉತ್ಸವ ಮುಗಿಸಿಕೊಂಡು ಸಂಕ್ರಾಂತಿ ಹಬ್ಬ ಆಚರಿಸಲು ಭಾನುವಾರ ಸಂಜೆ ಮನೆಗಳಿಗೆ ತೆರಳಿದರು.

ಭಾರದ ಕಲ್ಲು ಎಳೆದ ಎತ್ತುಗಳು

ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ವಿವಿಧೆಡೆಯಿಂದ ಬಂದಿದ್ದ ಎತ್ತುಗಳು ಭಾರದ ಕಲ್ಲು ಎಳೆದವು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಜನ ಕುತೂಹಲದಿಂದ ಸ್ಪರ್ಧೆಯ ವೀಕ್ಷಣೆ ಮಾಡಿದರು. 1419 ಅಡಿ ದೂರದ ವರೆಗೆ ಭಾರವಾದ ಕಲ್ಲು ಎಳೆದ ಎತ್ತುಗಳ ಮಾಲೀಕರಿಗೆ ಮೊದಲ ಬಹುವಾಗಿ ₹ 30 ಸಾವಿರ 1384 ಅಡಿ ದೂರದ ವರೆಗೆ ಭಾರವಾದ ಕಲ್ಲು ಎಳೆದ ಎತ್ತುಗಳ ಮಾಲೀಕರಿಗೆ ಎರಡನೇ ಬಹುಮಾನವಾಗಿ ₹ 20 ಸಾವಿರ 1290 ಅಡಿ ದೂರದ ವರೆಗೆ ಭಾರವಾದ ಕಲ್ಲು ಎಳೆದ ಎತ್ತುಗಳ ಮಾಲೀಕರಿಗೆ ತೃತೀಯ ಬಹುಮಾನವಾಗಿ ₹ 15 ಸಾವಿರ ಹಾಗೂ 1277 ಅಡಿ ದೂರದ ವರೆಗೆ ಭಾರವಾದ ಕಲ್ಲು ಎಳೆದ ಎತ್ತುಗಳ ಮಾಲೀಕರಿಗೆ ನಾಲ್ಕನೆಯ ಬಹುಮಾನವಾಗಿ ₹ 10 ಸಾವಿರ ನಗದು ವಿತರಿಸಲಾಯಿತು ಹೆದ್ದಾರಿ ಪಕ್ಕದ ಮೈದಾನದಲ್ಲಿ ನಡೆದ ಭಾರದ ಕಲ್ಲು ಎಳೆಯುವ ದೃಶ್ಯವನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ನಡೆದ ಟಗರಿನ ಕಾಳಗದಲ್ಲಿ ವಿಜೇತ ಟಗರಿನ ಮಾಲೀಕರಿಗೆ ಸಿದ್ದರಮಾನಂದ ಸ್ವಾಮೀಜಿ ಅವರು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ನಡೆದ ಟಗರಿನ ಕಾಳಗದಲ್ಲಿ ವಿಜೇತ ಟಗರಿನ ಮಾಲೀಕರಿಗೆ ಸಿದ್ದರಮಾನಂದ ಸ್ವಾಮೀಜಿ ಅವರು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಪಾಲ್ಗೊಂಡಿದ್ದ ಬಾಲಕಿಯರು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಪಾಲ್ಗೊಂಡಿದ್ದ ಬಾಲಕಿಯರು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಶಾಲಾ ಮಕ್ಕಳು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಶಾಲಾ ಮಕ್ಕಳು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಯೋಗ ಪ್ರದರ್ಶಿಸಿದ ಬಾಲಕ
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಯೋಗ ಪ್ರದರ್ಶಿಸಿದ ಬಾಲಕ
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಪಾಲ್ಗೊಂಡಿದ್ದ ಹಾಲುಮತ ಸಮುದಾಯದ ಮಹಿಳೆಯರು
‘ಹಾಲುಮತ ಸಂಸ್ಕೃತಿ ವೈಭವ‘ ಉತ್ಸವದಲ್ಲಿ ಪಾಲ್ಗೊಂಡಿದ್ದ ಹಾಲುಮತ ಸಮುದಾಯದ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT