ಶನಿವಾರ, ಮೇ 21, 2022
22 °C

ದೇಗುಲ ಹುಂಡಿ ಕಳವು; ಒಬ್ಬ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದಗಲ್: ಪಟ್ಟಣದ ಹೊರ ವಲಯದ ಲಿಂಗಸುಗೂರು ರಸ್ತೆ ಬದಿಯ ವಾಸುಕಿ ಸುಬ್ರಹ್ಮಣ್ಯೇಶ್ವರ ಮೂರ್ತಿ ಭಗ್ನಗೊಳಿಸಿ ಹಾಗೂ ದೇಗುಲ ಹುಂಡಿ ಕಳವು ಪ್ರಕರಣದ ಆರೋಪಿಯನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ.

ಮರಳಿ ಗ್ರಾಮದ ನಿವಾಸಿ ಶರಣಬಸವ ಬಸಪ್ಪ ಬಂಧಿತ ಆರೋಪಿ.

ರಾಮಲಿಂಗೇಶ್ವರ ದೇಗುಲ ಹುಂಡಿ ಮತ್ತು ನೀಲಕಂಠೇಶ್ವರ ದೇವಸ್ಥಾನದ ಹನುಮಂತ ದೇವರ ಹುಂಡಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾವರಗೇರಾ ಸೇರಿದಂತೆ ವಿವಿಧೆಡೆ ಕದ್ದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ನೇತೃತ್ವದಲ್ಲಿ ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.