ಬುಧವಾರ, ಸೆಪ್ಟೆಂಬರ್ 23, 2020
24 °C

ಸಂಚಾರ ನಿಯಮ ಉಲ್ಲಂಘಸಿದರೆ ಭಾರಿ ದಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮೋಟಾರ ವಾಹನ ಕಾಯ್ದೆ ನಿಯಮಗಳನ್ವಯ ವಿಧಿಸುತ್ತಿದ್ದ ಸ್ಥಳದಂಡಗಳನ್ನು ಸರ್ಕಾರವು ಪರಿಷ್ಕರಣೆ ಮಾಡಿ ಜೂನ್‌ 25 ರಂದು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಪರಿಷ್ಕೃತ ಮೊತ್ತದ ದಂಡವನ್ನು ಕೊಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ವಿ. ವೇದಮೂರ್ತಿ ಅವರು ಬುಧವಾರ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಗಮಿತಿ ಉಲ್ಲಂಘನೆ ಮಾಡಿದರೆ, ವಿಮಾ ರಹಿತ ವಾಹನ ಚಾಲನೆ ಮಾಡಿದರೆ, ನಿಲುಗಡೆ ನಿಷೇಧ, ಅಪಾಯಕರ ವಾಹನ ನಿಲುಗಡೆ ಮತ್ತು ಅಸುರಕ್ಷಿತವಾಗಿ ಸಾರ್ವಜನಿಕ ಸ್ಥಳದಲ್ಲಿ ವಾಹನದ ನಿಲುಗಡೆ ಮಾಡಿದರೆ ₹1,000 ದಂಡ. ಅಪಾಯಕರ ವಾಹನ ಚಾಲನೆ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ ಮಾಡಿದರೆ ಹಾಗೂ ಅಪಾಯಕರವಾಗಿ ಸಾಗಣೆ ಮಿತಿಗಿಂತ ಹೆಚ್ಚು ಸರಕುಗಳನ್ನು ಸಾಗಿಸಿದರೆ ಮೊದಲ ಅಪರಾಧಕ್ಕೆ ₹1,000 ದಂಡ ಹಾಗೂ ಎರಡನೇ ಬಾರಿ ಅಪಾರಾಧಕ್ಕೆ ₹2,000 ದಂಡ ವಿಧಿಸಲಾಗುತ್ತದೆ.

ನೋಂದಣಿ ರಹಿತ ವಾಹನ ಚಾಲನೆ ಮಾಡಿದರೆ ₹5,000 ಹಾಗೂ ಎರಡನೇ ಬಾರಿ ಅಪರಾಧ ಮಾಡಿದರೆ ₹10,000 ದಂಡವಿದೆ. ವಾಹನ ಅರ್ಹತಾ ಪತ್ರ ರಹಿತ (ಲೈಸೆನ್ಸ್‌) ಚಾಲನೆ ಮಾಡಿದರೆ ₹2,000 ಹಾಗೂ ಎರಡನೇ ಅಪರಾಧಕ್ಕೆ ₹5,000 ದಂಡ ವಿಧಿಸಲಾಗುವುದು.

ಈ ನಿಯಮಗಳು ಎಲ್ಲ ಮಾದರಿ ವಾಹನಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.