ಮಂಗಳವಾರ, ಜೂನ್ 15, 2021
21 °C

ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿದ ಘಟನೆ: ಇಬ್ಬರ ಮೃತದೇಹಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಕ್ತಿನಗರ(ರಾಯಚೂರು ಜಿಲ್ಲೆ): ಪೆದ್ದಕುರಂ (ಕುರ್ವಕುಲ) ಸಮೀಪದ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹಗಳು ತೆಲಂಗಾಣ ಗಡಿ ಭಾಗದ ಜುರಾಲಾ ಸಮೀಪದ  ಅಣೆಕಟ್ಟು ಬಳಿ ಬುಧವಾರ ಬೆಳಿಗ್ಗೆ 7.15ಕ್ಕೆ ಪತ್ತೆಯಾಗಿವೆ. ಆದರೆ,  ಅವು ಯಾರವು ಎಂಬುದು ಗೊತ್ತಾಗಿಲ್ಲ.

ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಂಗಳವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗದ ಸಂದರ್ಭದಲ್ಲಿ, ನಾಲ್ವರು ಜುರಾಲಾ ಅಣೆಕಟ್ಟು ಬಳಿ ಸಿಲುಕಿರಬಹುದು ಎಂದು ಎನಡಿಆರೆಫ್ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದರು.

ಸೋಮವಾರ (ಆಗಸ್ಟ್ 17) ಸಂಜೆ ತೆಲಂಗಾಣ ರಾಜ್ಯದ ಮಖ್ತಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಪಾಡುವಿನಿಂದ 13 ಮಂದಿ ಸಂತೆ ಮುಗಿಸಿಕೊಂಡು ತಮ್ಮೂರು ಪೆದ್ದಕುರಂಗೆ ತೆಪ್ಪದಲ್ಲಿ ಮರಳುತ್ತಿದ್ದ ವೇಳೆ ಘಟನೆ ನಡೆದಿತ್ತು. 9 ಮಂದಿಯನ್ನು ರಕ್ಷಿಸಲಾಗಿತ್ತು. ಒಬ್ಬ ಬಾಲಕಿ ಮತ್ತು ಮೂವರು ಮಹಿಳೆಯರು ನಾಪತ್ತೆಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು