ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಎಂಆರ್‌ ತೋರಿಸಿ ವಂಚನೆ: ಇಬ್ಬರ ಬಂಧನ

Last Updated 29 ಡಿಸೆಂಬರ್ 2018, 8:45 IST
ಅಕ್ಷರ ಗಾತ್ರ

ರಾಯಚೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ ನೇಮಕಾತಿ ಮಾಡಿಸುವುದಾಗಿ ನಂಬಿಸಿ, ಆನಂತರ ಓಎಂಆರ್‌ ಸೀಟು ತೋರಿಸಿ ಹಣ ಪಡೆದು ಮೋಸ ಮಾಡಿದ್ದ ಇಬ್ಬರು ವಂಚಕರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಅಜಯಕುಮಾರ ಮೇಹ್ತಾ ಹಾಗೂ ದೇವಪ್ಪ ನೀರಲಕೇರಿ ಬಂಧಿತರು. ಆರೋಪಿಗಳಿಂದ 9 ಓಎಂಆರ್‌ ಸೀಟುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಮೂರು ಜನರಿಂದ ₹8 ಲಕ್ಷ ಪಡೆದು ಮೋಸ ಮಾಡಿದ್ದಾರೆ. ಓಎಂಆರ್‌ ಅಸಲೀತನದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿನಿ ಅಕ್ಕಮ್ಮ ಹಿರೇಮಠ ಅವರು ನೀಡಿದ್ದ ದೂರನ್ನು ಆಧರಿಸಿ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಎಫ್‌ಡಿಎ ನೇಮಕಾತಿ ಮಾಡಿಸುವುದಾಗಿ ಅಕ್ಕಮ್ಮ ಅವರ ತಂದೆಯನ್ನು ನಂಬಿಸಿ ₹3 ಲಕ್ಷ ಹಣ ಪಡೆದಿದ್ದರು. ಇನ್ನುಳಿದ ₹2 ಲಕ್ಷ ಕೊಟ್ಟರೆ ನೇಮಕ ಮಾಡಿಸುದಾಗಿ ಮತ್ತೆ ಮನೆಗೆ ಆರೋಪಿಗಳು ಬಂದಿದ್ದರು. ಪರೀಕ್ಷೆಯನ್ನೆ ಬರೆದಿಲ್ಲ; ನೇಮಕ ಹೇಗಾಗುತ್ತದೆ ಎಂದು ಸಂಶಯಗೊಂಡ ಅಕ್ಕಮ್ಮ ಅವರು ಲಿಂಗಸುಗೂರು ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT