ಸಿರವಾರ: ತಾಲ್ಲೂಕಿನ ಬಲ್ಲಟಗಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಮುಖರಾದ ಹಕ್ಕ ಬುಕ್ಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯದ 686ನೇ ವರ್ಷ ಸಂಸ್ಥಾಪನಾ ದಿನವನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಯುವ ಘಟಕ ಉಪಾಧ್ಯಕ್ಷ ಭೀಮಾಶಂಕರ ಮಾತನಾಡಿ, ‘ಹಕ್ಕ ಬುಕ್ಕರು ನಾಯಕ ಸಮಾಜದ ಕುಡಿಗಳಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ಇವರ ಮಹತ್ಕಾರ್ಯಗಳು ನಮಗೆ ಪ್ರೇರಣೆದಾಯಕವಾಗಿದೆ‘ ಎಂದು ಹೇಳಿದರು.

ಬಲ್ಲಟಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಶಿವಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ಕುಂದಾಳ್, ಗೋವಿಂದಪ್ಪ, ಮುಖಂಡರಾದ ಎನ್.ಮಹಾದೇವಪ್ಪ, ಡಿ.ಅರುಣ್ ಕುಮಾರ್, ನಾಗರಾಜ ಮಲ್ಲಟ, ಡಿ.ಪ್ರಕಾಶ್, ಟಿ.ಮಾರೆಪ್ಪ, ಹನುಮಂತ್ರಾಯ ಕಾವಲಿ, ಸುನೀಲ್, ಮಾರೆಪ್ಪ, ನಿಂಗಪ್ಪ , ರಾಜೇಶ್, ನಾಗರಾಜ ಚಿಪ್ಪಾಡಿ, ಮುಕ್ಕಣ, ಚನ್ನಬಸವ ಮ್ಯಾಡಿ, ಕೃಷ್ಣ, ಆಂಜನೇಯ ಕಲ್ಮಲ್ ಇದ್ದರು.

ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ
ಸಿರವಾರ: ‘ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯದ ಕೇಂದ್ರವಾಗಿದ್ದು, ಇದರ ವೈಭವವು ಭಾರತದ ಕಿರೀಟವಿದ್ದಂತೆ‘ ಎಂದು ರಂಗನಾಥ ನಾಯಕ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ 686ನೇ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಮುದಾಯದ ಮುಖಂಡರಾದ ಕಲ್ಲೂರು ಲಕ್ಷ್ಮಣ, ಅಪ್ಪಾಜಿ ನಾಯಕ, ಸಿಕಂಟಿ ಮಲ್ಲಿಕಾರ್ಜುನ ನಾಯಕ, ಯಲ್ಲಪ್ಪ ದೊರೆ ಚಿನ್ನಾನ್, ಅಂಬರೇಶ ನಾಯಕ, ಬಸು ನಾಯಕ, ವಿರೇಶ್ ನಾಯಕ, ಗುಜ್ಜಲ್ ಗೋಪಾಲ ನಾಯಕ, ಕೆ.ಗೋಪಾಲ್ ನಾಯಕ ಸೇರಿದಂತೆ ನಾಯಕ ಸಮಾಜದ ಯುವಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.