ಸಿರವಾರ: ತಾಲ್ಲೂಕಿನ ಚಾಗಭಾವಿ ಗ್ರಾಮದ 2 ಮತ್ತು 3ನೇ ವಾರ್ಡ್ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಗ್ರಾಮದ ಕೂಲಿಕಾರರಿಗೆ ನರೇಗಾದಡಿ ಸಮರ್ಪಕ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಗ್ರಾಮದ ಎರಡು ವಾರ್ಡ್ಗಳಿಗೆ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಕುರಿತು ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಅನೇಕ ಬಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಾರ್ಡ್ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರದ ಆದೇಶದಂತೆ ನರೇಗಾದಡಿ ಕೂಲಿಕಾರಿಗೆ ನೂರು ದಿನ ಉದ್ಯೋಗ ನೀಡಬೇಕು. ಅಧಿಕಾರಿಗಳು ಯಾವುದೇ ಕೆಲಸ ನೀಡುತ್ತಿಲ್ಲ’ ಎಂದು ಕಾರ್ಮಿಕ ಎ.ಬಸವರಾಜ ನಾಯಕ ಆರೋಪಿಸಿದರು.

‘ಕೂಡಲೇ ಕಲುಷಿತ ನೀರು ಸರಬರಾಜು ಬಂದ್ ಮಾಡಿ ಬಳಕೆಗೆ ಯೋಗ್ಯವಾದ ನೀರು ಒದಗಿಸಬೇಕು ಮತ್ತು ನರೇಗಾದಡಿ ಕೂಲಿ ಕೆಲಸ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ತಾ.ಪಂ. ಸಹಾಯಕ ನಿರ್ದೇಶಕ ಮಂಜುನಾಥ ಜಾವೂರು ದೂರವಾಣಿ ಮೂಲಕ ಪ್ರತಿಭಟನಕಾರರೊಂದಿಗೆ ಮಾತನಾಡಿ,‘ನರೇಗಾ ಕೂಲಿ ಕೆಲಸದ ಸಮಸ್ಯೆಯನ್ನು ಎರಡು ದಿನಗಳೊಳಗೆ ಬಗೆಹರಿಸಿ ಕೆಲಸ ನೀಡಲಾಗುವುದು. ನೀರಿನ ಸಮಸ್ಯೆಯ ಪರಿಹಾರಕ್ಕೆ ಪಿಡಿಒಗೆ ಸೂಚಿಸಲಾಗಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದರು.

ವಾರ್ಡ್ನ ನಿವಾಸಿಗಳಾದ ಮಲ್ಲಮ್ಮ, ಉಮಾದೇವಿ, ಹುಲಿಗೆಮ್ಮ, ಚಂದ್ರಮ್ಮ, ಶಿವಮ್ಮ, ಯಲ್ಲಪ್ಪ, ಆಂಜನೇಯ, ಮಹಾಂತೇಶ, ಹನುಮಂತ್ರಾಯ, ರಂಗಣ್ಣ, ಸರಸ್ವತಿ, ಅಯ್ಯಮ್ಮ, ಉಮಾದೇವಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಲುಷಿತ ನೀರು ಪೂರೈಕೆ ನರೇಗಾ ಕೆಲಸ ನೀಡದ ಅಧಿಕಾರಿಗಳು ಆಸ್ಪತ್ರೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.