ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು 6 ಲಕ್ಷ ಮತದಾರರು, ಈಗ 19 ಲಕ್ಷ; ಪರಿಣಾಮ ಬೀರಿದ ಮಿಂಚಿನ ನೋಂದಣಿ ಅಭಿಯಾನ

Last Updated 26 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆಗೆ ಸಂಸದರ ಆಯ್ಕೆಗಾಗಿ ರಾಯಚೂರಿನಲ್ಲಿ 1951 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಆರು ಲಕ್ಷವಿದ್ದ ಮತದಾರರ ಸಂಖ್ಯೆಯು, ಈಗ ನಡೆಯುತ್ತಿರುವ 17ನೇ ಲೋಕಸಭೆ ಚುನಾವಣೆ ಹೊತ್ತಿಗೆ 19 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ 68 ವರ್ಷಗಳಲ್ಲಿ 13 ಲಕ್ಷದಷ್ಟು ಮತದಾರರು ಹೆಚ್ಚಿದ್ದಾರೆ.

ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ‘ಯಾದಗಿರಿ’ ಕ್ಷೇತ್ರ ಎಂದು ಗುರುತಿಸಲಾಗಿತ್ತು. ನಂತರ 1971 ರಲ್ಲಿ ನಡೆದ ಐದನೇ ಲೋಕಸಭೆ ಚುನಾವಣೆವರೆಗೂ ಮೈಸೂರು ಪ್ರಾಂತ ರಾಜ್ಯದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರವಿತ್ತು. 1977 ರಲ್ಲಿ ನಡೆದ 6ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಹೆಸರಿನಡಿ ರಾಯಚೂರು ಲೋಕಸಭೆ ಕ್ಷೇತ್ರ ಎಂದು ಗುರುತಿಸಲಾಯಿತು.

ಹಿಂದೆ ನಡೆದ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿಕೊಂಡು ಮತದಾರರ ಪ್ರತಿಶತ ಏರಿಕೆಯನ್ನು ನೋಡಿದಾಗ 1991 ರಿಂದ 1996 ರ ಅವಧಿಯಲ್ಲಿ ಮತದಾರರ ಪ್ರಮಾಣದಲ್ಲಿ ಗರಿಷ್ಠ ಏರಿಕೆಯಾಗಿದೆ. ಮೊದಲನೇ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಮತದಾರರ ಸಂಖ್ಯೆಯನ್ನು ಹೋಲಿಸಿದಾಗ ಶೇ 216 ರಷ್ಟು ವೃದ್ಧಿ ಆಗಿರುವುದನ್ನು ಕಾಣಬಹುದು.

ಚುನಾವಣೆಯಿಂದ ಚುನಾವಣೆಗೆ ಹೆಚ್ಚಳವಾಗಿರುವ ಮತದಾರರ ಒಟ್ಟು ಸಂಖ್ಯೆಯನ್ನು ಹೋಲಿಕೆ ಮಾಡಿದರೆ 2009, 20014 ಹಾಗೂ ಈಗ ನಡೆದ 2019 ರ ಚುನಾವಣೆಯಲ್ಲಿ ಲಕ್ಷಾಂತರ ಮತದಾರರು ನೋಂದಣಿ ಆಗಿರುವುದು ಗಮನ ಸೆಳೆಯುತ್ತದೆ. 2011 ರಿಂದ ಆರಂಭಿಸಿದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯ ಪರಿಣಾಮ ಆಗಿರುವುದು ಎದ್ದು ಕಾಣುತ್ತದೆ. ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ನಡೆಯುವ ನೋಂದಣಿ ಅಭಿಯಾನ ಮತ್ತು ಜಾಗೃತಿಯಿಂದಾಗಿ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಆಗಾಧವಾಗಿದೆ.

ರಾಜಕೀಯ ಪ್ರಕ್ರಿಯೆಯಲ್ಲಿ ಯುವಕರನ್ನು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶಕ್ಕಾಗಿ ಚುನಾವಣೆ ಆಯೋಗದ ಸಂಸ್ಥಾಪನೆ ದಿನವಾದ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿಮಿತ್ತ ಮತದಾರರ ನೋಂದಣಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಮಿಂಚಿನ ನೋಂದಣಿ ಪ್ರಕ್ರಿಯೆ ಮೂಲಕ 18 ವರ್ಷ ತುಂಬಿದ ಎಲ್ಲ ಯುವ ಜನರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದರ ಪರಿಣಾಮದಿಂದ ಮತದಾರರ ಸೇರ್ಪಡೆ ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಳವಾಗುತ್ತಾ ಬಂದಿದೆ.

ರಾಯಚೂರು ಲೋಕಸಭೆ ಕ್ಷೇತ್ರದ ಮತದಾನವಾದ ವಿವರ

ವರ್ಷ ಒಟ್ಟು ಮತದಾರರು ಹೆಚ್ಚಳ ಪ್ರಮಾಣ (ಶೇ)

1951 5,99,904 –

1957 7,18,374 20

1962 4,39,047 –38

1967 4,89,226 11

1971 5,23,684 7

1977 6,29,721 20

1980 7,00,751 11

1984 7,68,520 10

1989 10,35,569 35

1991 10,42,161 0.63

1996 12,04,474 16

1998 12,74,111 6

1999 12,80,563 0.5

200414,13,018 10

200914,86,326 5

201416,61,606 12

201918,93,576 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT