ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕಾಲುವೆ ಗೋಡೆ ಕುಸಿತ

ಪರಪುರ: ಕೊನೆ ಭಾಗದ ಅನ್ನದಾತರಲ್ಲಿ ಆತಂಕ
Last Updated 21 ಸೆಪ್ಟೆಂಬರ್ 2020, 1:37 IST
ಅಕ್ಷರ ಗಾತ್ರ

ಜಾಲಹಳ್ಳಿ: ಸಮೀಪದ ಪರಪುರ ಗ್ರಾಮದ ಕೆರೆಯಿಂದ ನಾರಾಯಣಪುರ ಬಲ ದಂಡೆಯ 11ನೇ ವಿತರಣಾ ಕಾಲುವೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ ಕಾಲುವೆಯ ಗೋಡೆ ಕುಸಿದಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ಸುಮಾರು ₹2.50 ಕೋಟಿ ಅನುದಾನದಲ್ಲಿ 2,200 ಮೀಟರ್ ಉದ್ದದ ಈ ಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಎಸ್.ಎನ್. ಮುಲ್ಲಾ ಎನ್ನುವವರಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ನಿರ್ವಹಣೆಯನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್ ಆಶೋಕ ಅವರಿಗೆ ವಹಿಸಲಾಗಿದೆ.

ಈ ಕಾಲುವೆ ಮೂಲಕ ಕೊನೆ ಭಾಗದ ಮಂಡಲಗುಡ್ಡ, ಗಾಜಲದಿನ್ನಿ, ಮುಕ್ಕನಾಳ ಹಾಗೂ ಪರಪುರ ಸೇರಿದಂತೆ ಇತರೆ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಅದರೆ, ನಿರ್ಮಾಣ ಹಂತದಲ್ಲಿಯೇ ಕಾಲುವೆಯ ಗೋಡೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸಿಗುವುದೂ ಅನುಮಾನವಾಗಿದೆ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ನರಸಣ್ಣ ನಾಯಕ ಅತಂಕ ವ್ಯಕ್ತಪಡಿಸಿದರು.

ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಕಾಮಗಾರಿ ಶಾಸಕ ಕೆ.ಶಿವನಗೌಡ ನಾಯಕ ಅವರ ಉದ್ಘಾಟನಾ ಕಾಮಗಾರಿಗಳ ಪಟ್ಟಿಯಲ್ಲಿ ಇತ್ತು. ಉದ್ಘಾಟಿಸಿದ ಮರುದಿನವೇ ಕಾಲುವೆ ಗೋಡೆ ಕುಸಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಲುವೆ ಗೋಡೆ ಕುಸಿದಿರುವುದು ಗಮನಕ್ಕೆ‌ ಬಂದಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಳೆದ ಹತ್ತು ದಿನಗಳ ಹಿಂದೆ ಮಳೆ ಇಲ್ಲದೇ ಇರುವುರಿಂದ ಕೊನೆ ಭಾಗದ ರೈತರು ಹಟಮಾಡಿ ನೀರು ಬಿಡಿಸಿಕೊಂಡಿದ್ದಾರೆ. ತಕ್ಷಣ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಗುತ್ತಿಗೆದಾರಿಗೆ ತಿಳಿಸಲಾಗಿದೆ ಎಂದು ಎಂಜಿನಿಯರ್‌ ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT