ರಾಯಚೂರು: ‘ಕೇಂದ್ರ ಬಜೆಟ್ ದೇಶದ ಯುವ ಜನತೆ, ಮಹಿಳೆಯರು ಮತ್ತು ರೈತರಲ್ಲಿ ನಿರಾಸೆ ಮೂಡಿಸಿದೆ’ ಎಂದು ಎಐಡಿವೈಒ ಸಂಘಟನೆ ಹೇಳಿದೆ.

‘ದೇಶದ ಶೇ65 ಕ್ಕಿಂತ ಹೆಚ್ಚಿರುವ ದುಡಿಯುವ ವಯಸ್ಸಿನ ಜನರ ಭವಿಷ್ಯಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ನೇರ ಉದ್ಯೋಗ ಸೃಷ್ಟಿಸುವ ಮತ್ತು ಖಾಲಿ ಹುದ್ದೆ ಭರ್ತಿ ಮಾಡುವ ಪ್ರಸ್ತಾವ ಮಾಡಿಲ್ಲ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ವೆಚ್ಚವನ್ನು ಕಡಿತಗೊಳಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಭಾಳ ಮತ್ತು ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಟೀಕಿಸಿದ್ದಾರೆ.

‘ಕೃಷಿ ಕ್ಷೇತ್ರಕ್ಕೆ ನೀಡಿದ ಹಣದಲ್ಲಿ ₹900 ಕೋಟಿ ಕಡಿಮೆಯಾಗಿದೆ. ನರೇಗಾ ಯೋಜನೆಯ ಹಣ ಕಡಿತಗೊಳಿಸಲಾಗಿದೆ. ಅಂದಾಜು 21 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಠಿಸುವ ಪ್ರಸ್ತಾವನೆಯಲ್ಲಿ ಸ್ಪಷ್ಟತೆ ಇಲ್ಲ, ಎಂಸಿಪಿ ಬಗ್ಗೆ ಖಾತರಿ ನೀಡದ ಸರ್ಕಾರ ಫಸಲ್ ಭಿಮಾ ಯೋಜನೆ ಮೂಲಕ ಖಾಸಗಿ ಕಂಪೆನಿಗಳಿಗೆ ಶೇ 52 ರಷ್ಟು ಲಾಭ ಮಾಡಿಕೊಡುತ್ತಿದೆ. ದೇಶದ ಶೇ 57 ರಷ್ಟು ಜನಸಂಖ್ಯೆಯನ್ನು ಬಡವರನ್ನಾಗಿಯೇ ಇರಿಸುವ ಉದ್ದೇಶದಿಂದ ಪಿಎಂಜಿಕೆಎಐ ಯೋಜನೆಯನ್ನು ಐದು ವರ್ಷ ಮುಂದುವರೆಸಿದೆ,

ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿರುವುದು ಅತಿ ಶ್ರೀಮಂತರಿಗೆ ಮಾತ್ರ ಲಾಭದಾಯಕವಾಗಿದೆ. ಜಿಎಸ್ಟಿ ಸಂಗ್ರಹ ಮೂಲಕ ಜನರ ಗಳಿಕೆಯನ್ನು ಮತ್ತಷ್ಟು ಹೀರಿಕೊಳ್ಳುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ತಿಂಗಳು ಉಳಿದಿರುವಾಗಲೇ ಜಿಎಸ್ಟಿ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ8.86 ರಷ್ಟು ಏರಿಕೆಯಾಗಿದೆ. ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.