ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಮನೆ ಕುಸಿತ, ಬೆಳೆ ಜಲಾವೃತ

Last Updated 12 ಸೆಪ್ಟೆಂಬರ್ 2013, 8:52 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ರಾಯಚೂರು ತಾಲ್ಲೂಕಿನ ಹಲವು ಗ್ರಾಮಗಳು, ಸುತ್ತಮುತ್ತಲಿನ ಬೆಳೆ ತೊಂದರೆಗೆ ಸಿಲುಕಿವೆ.

ಚಂದ್ರಬಂಡಾ, ಡಿ. ರಾಂಪುರ, ಹೆಂಬೆರಾಳು, ನಾಗಲಾಪುರ, ಮೀರಾಪುರ ಮುಂತಾದ ಗ್ರಾಮಗಳು ತೊಂದರೆಗೆ ಸಿಲುಕಿವೆ. ಬುಧವಾರ ಮಧ್ಯಾಹ್ನದ ಬಳಿಕವೂ ವ್ಯಾಪಕ ಮಳೆಯಾಗುತ್ತಿದೆ. ಸಿಂಧನೂರು ತಾಲ್ಲೂ ಕಿನಲ್ಲಿ 11 ಮನೆಗಳು ಭಾಗಶಃ ಕುಸಿದಿವೆ.

ಜಿಲ್ಲಾಡಳಿತ ಮಾಹಿತಿ ಪ್ರಕಾರ ಸಿಂಧನೂರು ತಾಲ್ಲೂಕಿನ ವಲ್ಕಂದಿನ್ನಿ ಯಲ್ಲಿ 94.6 ಮಿ.ಮಿ ಗರಿಷ್ಠ ಮಳೆ ಸುರಿದಿದೆ. ಇದೇ ತಾಲ್ಲೂಕಿನ ಜವಳಗೇರದಲ್ಲಿ 69 ಮಿ.ಮಿ ಮಳೆ ಸುರಿದಿದೆ. ಇಷ್ಟು ಗರಿಷ್ಠ ಪ್ರಮಾಣದ ಮಳೆ ರಾಯಚೂರು ತಾಲ್ಲೂಕಿನಲ್ಲಿ ಸುರಿಯದೇ ಇದ್ದರೂ ನಷ್ಟ ಮಾತ್ರ ಹೆಚ್ಚಾಗಿದೆ. ಗ್ರಾಮಗಳ ಪಕ್ಕ ಹಳ್ಳ ತುಂಬಿ ಹರಿಯುತ್ತಿರುವುದು, ರಸ್ತೆಗಳು, ಹೊಲದ ಒಡ್ಡು ಕೊಚ್ಚಿಕೊಂಡು ಹೋಗಿರುವುದರಿಂದ ಗ್ರಾಮಸ್ಥರು ತೊಂದರೆಗೀಡಾಗಿದ್ದಾರೆ.

ಮೂರು ದಿನಗಳಿಂದ ಜಿಲ್ಲೆಯ ಲ್ಲಿಯೇ ಗರಿಷ್ಠ ಮಳೆ ರಾಯಚೂರು ತಾಲ್ಲೂಕಿನಲ್ಲಿ ಸುರಿದಿದೆ. ಟೊಮೆಟೊ, ಉಳ್ಳಾಗಡ್ಡಿ, ಸೂರ್ಯಕಾಂತಿ, ಹತ್ತಿ, ತೊಗರಿ ಬೆಳೆದ ಹೊಲಗಳು ಜಲಾವೃತಗೊಂಡಿವೆ.

ಮುಖ್ಯವಾಗಿ ಸೂರ್ಯಕಾಂತಿ ಹೂ ಬಿಡುವ ಹಂತದಲ್ಲಿದ್ದು, ಮಳೆಯಾಗಿದ್ದರಿಂದ ಬೆಳೆ ನಷ್ಟ ಪ್ರಮಾಣ ಹೆಚ್ಚಾಗಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಪ್ರಜಾವಾಣಿಗೆ ತಿಳಿಸಿದರು.

ಮಳೆ ವಿವರ: ಮಂಗಳವಾರ ರಾತ್ರಿ ಯಿಂದ ಬುಧವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ 11.2 ಮಿ.ಮಿ  ಮಳೆ ಬಿದ್ದಿದೆ. ರಾಯಚೂರು ತಾಲ್ಲೂಕು–16.8, ದೇವದುರ್ಗ–4.4, ಮಾನ್ವಿ–18.5, ಸಿಂಧನೂರು– 16.3 ಮಿ.ಮಿ ಮಳೆ ಬಿದ್ದಿದೆ.

ರಾಯಚೂರು ತಾಲ್ಲೂಕಿನ ಚಂದ್ರಬಂಡಾ – 20 ಮಿ.ಮಿ, ಗಾಜರಾಳ– 382, ಜೇಗರಕಲ್‌– 20 ಮಿ.ಮಿ, ಗುರ್ಜಾಪುರ 19 ಮಿ.ಮಿ ಮಳೆ ಆಗಿದೆ. ಮಾನ್ವಿ ತಾಲ್ಲೂಕಿನಲ್ಲಿ ಮಾನ್ವಿ– 18.5, ಕುಡಿರ್– 17.2, ಕಲ್ಲೂರು– 4.6, ಸಿರವಾರ– 26.4, ಮಲ್ಲಟ– 4.0, ಕುರಕುಂದ–4.0, ಕವಿ ತಾಳ– 5.0, ರಾಜಲಬಂಡಾ 23.0, ಹಾಲಾಪುರ– 12  ಮಿ.ಮಿ ಮಳೆ ಆಗಿದೆ.
ದೇವದುರ್ಗ ತಾಲ್ಲೂಕಿನಲ್ಲಿ ದೇವ ದುರ್ಗ– 4.4 ಮಿ.ಮಿ, ಅರಕೇರಾ– 28.0, ಗಬ್ಬೂರು–42.2, ಗಲಗ–2.0, ಜಾಲಹಳ್ಳಿ– 52.0 ಮಿ.ಮಿ ಮಳೆ ಆಗಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಹಟ್ಟಿ–41.0, ಮಸ್ಕಿ–1.2, ಮುದಗಲ್‌–1.8 ಮಿ.ಮಿ ಮಳೆ ಆಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ಸಿಂಧನೂರು–16.3, ಜವಳಗೇರಾ–69,0, ಸಾಲಗುಂದ–23.4, ಬಳಗಾ ನೂರು–6.0, ಗುಡದೂರು–3.2, ತುರುವಿಹಾಳ– 23.0, ವಲ್ಕಂದಿನ್ನಿ–94.6, ಜಾಲಿಹಾಳ–22.2, ಹೆಡಗಿ ನಾಳ– 32.6,ಗುಂಜಳ್ಳಿ–7 ಮಿ.ಮಿ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT